ಚಿತ್ರದುರ್ಗ: ರಾಜ್ಯದ 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ (ಪಿಎಸ್ಐ) ಆಯ್ಕೆಯಲ್ಲಿ ಆಗಿದ್ದ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಪಿಎಸ್ಐ ಹಗರಣದಲ್ಲಿ ಎಡಿಜಿಪಿ ಅವರನ್ನೇ ಬಂಧಿಸಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಇಂದು ಈ ಬಗ್ಗೆ ಸುದ್ದಿಗಾರರಿಗೆ ಹೇಳಿಕೆ ನೀಡಿದ ಗೃಹ ಸಚಿವರು, ಪಿಎಸ್ಐ ನೇಮಕಾತಿ ಮಾಡಿಕೊಳ್ಳಲು ಆಗದಂತೆ ತಡೆಯಾಜ್ಞೆ ತಂದಿದ್ದರು. ಆದರೆ ಇದೀಗ ಅವೆಲ್ಲಾ ಸರಿಯಾಗಿದೆ. ಪುನರ್ ಪರೀಕ್ಷೆ ಮಾಡಿ ಹೊಸ ಪಿಎಸ್ಐ ಲಿಸ್ಟ್ ಸಿದ್ಧ ಮಾಡಿದ್ದೇವೆ. ಆದರೆ ತೊಡಕುಗಳನ್ನು ನಿವಾರಿಸಿ ನೇಮಕ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.