Job alert:ಕೇಂದ್ರ ಸರ್ಕಾರದ ತೆಹ್ರಿ ಹೈಡ್ರೋ ಕಂಪನಿಯಲ್ಲಿ 55 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ!
ಬೆಂಗಳೂರು : ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಕಂಪನಿಯು ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರದ ಆಧೀನದಲ್ಲಿ ಈ ಸಂಸ್ಥೆಯು ಕಾರ್ಯ ನಿರ್ವಹಿಸುತ್ತದೆ. ಡೆಪ್ಯುಟಿ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟಂಟ್ ಮತ್ತು ಸೀನಿಯರ್ ಮೆಡಿಕಲ್ ಆಫೀಸರ್ ಎಂಬ ಒಟ್ಟು 55 ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇಂದೇ ಅರ್ಜಿಯನ್ನು ಸಲ್ಲಿಸಿ.
ಆಗಸ್ಟ್ 16 ರೊಳಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಎಲ್ಲರೂ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳು:
ಮ್ಯಾನೇಜರ್, 25 ಹುದ್ದೆಗಳು
ಅರ್ಹತೆ : ಬಿಇ, ಬಿ.ಟೆಕ್, ಎಮ್ ಟೆಕ್ ಅಥವಾ ಸ್ನಾತಕೋತ್ತರ ಪದವಿ.
ಆಸಿಟ್ಟೆಂಟ್ ಮ್ಯಾನೇಜರ್, 19 ಹುದ್ದೆಗಳು
ಅರ್ಹತೆ: ಪದವಿ,ಬಿಇ, ಬಿ.ಟೆಕ್, ಎಮ್ ಟೆಕ್.
ಡೆಪ್ಯುಟಿ ಮ್ಯಾನೇಜರ್, 3 ಹುದ್ದೆಗಳು
ಅರ್ಹತೆ : ಪದವಿ
ಸೀನಿಯರ್ ಮ್ಯಾನೇಜರ್, 3 ಹುದ್ದೆಗಳು
ಅರ್ಹತೆ : ಬಿಇ, ಬಿ.ಟೆಕ್, ಎಮ್ ಟೆಕ್
ಹಿರಿಯ ವೈದ್ಯಾಧಿಕಾರಿ, 5 ಹುದ್ದೆಗಳು
ಅರ್ಹತೆ : ಎಂಬಿಬಿಎಸ್
ವಯೋಮಿತಿ :
ಮ್ಯಾನೇಜರ್ 45 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ 32 ವರ್ಷ
ಡೆಪ್ಯುಟಿ ಮ್ಯಾನೇಜರ್ 40 ವರ್ಷ
ಸೀನಿಯರ್ ಮ್ಯಾನೇಜರ್ 48 ವರ್ಷ
ಹಿರಿಯ ವೈದ್ಯಾಧಿಕಾರಿ 34 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯಸ್ಸಿನ ಸಡಿಲಿಕೆ ಎಸ್ ಸಿ ಮತ್ತು ಎಸ್ ಟಿ ಗೆ 5 ವರ್ಷ ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯುಬಿಡಿ ಒಬಿಸಿ ಗೆ 13 ವರ್ಷ ಹಾಗೂ ಪಿಡಬ್ಲ್ಯುಬಿಡಿ ಎಸ್‌ಸಿ ಎಸ್‌ಟಿ ಗೆ 15 ವರ್ಷ ಹೆಚ್ಚಿನ ಮೀಸಲಾತಿಯನ್ನು ನೀಡಲಾಗಿದೆ.
ಸಾಮಾನ್ಯ, ಒಬಿಸಿ, ಇಡಬ್ಲ್ಯುಎಸ್ ಅಭ್ಯರ್ಥಿಗಳು ಅರ್ಜಿ ಶುಲ್ಕ 600 ರೂ ಪಾವತಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಉಳಿದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು. ಸಂದರ್ಶನ ಮಾಡುವ ಮೂಲಕ ಆಯ್ಕೆಯ ಪ್ರಕ್ರಿಯೆ ನಡೆಯುತ್ತದೆ.
ಹೆಚ್ಚಿನ ಮಾಹಿತಿಗೆ
https://thdc.co.in/sites/default/files/DETAILED_ADVERTISEMENT.pdf
thdc.co.inಕ್ಕೆ ಭೇಟಿ ನೀಡಿ ಅಥವಾ thdcrecruitment@thdc.co.in ಇಮೇಲ್‌ಗೆ ಸಂಪರ್ಕಿಸಿ.