Muhammad Yunus: “ದೇಶದ ಹಿಂದೂಗಳ ರಕ್ಷಣೆ ಮಾಡಿ” ಬಾಂಗ್ಲಾಗೆ ಮೋದಿ ಎಚ್ಚರಿಕೆ!!

IMG-20240808-WA0090
Share It

ಢಾಕಾ: ಬಾಂಗ್ಲಾ ದ ಸಂಸತ್ತಿನಲ್ಲಿ ಸರ್ಕಾರದ ವಿಸರ್ಜನೆಯ ಬಳಿಕ ಹಂಗಾಮಿ ಸರ್ಕಾರದ ರಚನೆಯನ್ನು ಮಾಡಲಾಗಿದೆ. ಸದ್ಯಕ್ಕೆ ಹಂಗಾಮಿ ಪ್ರಧಾನಿಯಾಗಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಮೊಹಮ್ಮದ್‌ ಯೂನಸ್‌ ಅಧಿಕಾರವನ್ನು ಪಡೆದಿದ್ದಾರೆ. ಈ ಬಗ್ಗೆ ಮೋದಿ ಮೊಹಮ್ಮದ್‌ ಯೂನಸ್‌ ಅವರಿಗೆ ಅಭಿನಂದನೆಯನ್ನು ತಿಳಿಸಿ ದೇಶದಲ್ಲಿ ಹಿಂದೂಗಳನ್ನು ರಕ್ಷಣೆ ಮಾಡಿ ಎಂದು ಹೇಳಿದ್ದಾರೆ.

ಈ ಬಗ್ಗೆ ಮೋದಿಯವರು ಮಾತನಾಡಿ ” ಮೊದಲನೆಯದಾಗಿ ನೀವು ಅಧಿಕಾರವನ್ನು ಪಡೆದಿರುವುದಕ್ಕೆ ಅಭಿನಂದನೆಗಳು. ಆದಷ್ಟು ಬೇಗ ದೇಶದಲ್ಲಿ ಶಾಂತಿ ನೆಲೆಸಲಿ ಎಲ್ಲವೂ ಸರಿ ಹೋಗುವ ಭರವಸೆ ಇದೆ. ಹಿಂದೂಗಳನ್ನು ಸೇರಿಸಿದಂತೆ ಅಲ್ಪ ಸಂಖ್ಯಾತರು ರಕ್ಷಣೆ ಮಾಡುತ್ತೀರಿ ಎಂದು ನಂಬುತ್ತೇನೆ. ದೇಶದ ಭದ್ರತೆ, ಶಾಂತಿ ಹಾಗೂ ಇತರ ವಿಷಯಗಳಲ್ಲಿ ಭಾರತದ ಸಹಕಾರ ಇದೆ ಎಂದು ಟ್ವೀಟ್ ಮುಲಕ ಮೋದಿ ತಿಳಿಸಿದ್ದಾರೆ.”

ಬಾಂಗ್ಲಾ ದಲ್ಲಿ ಶುರುವಾದ ಪ್ರತಿಭಟನೆಯಿಂದ ಸುಮಾರು 97 ಕ್ಕೂ ಹೆಚ್ಚಿನ ಹಿಂದೂ ದೇವಾಲಯಗಳನ್ನು ಮುಸ್ಲಿಂ ಮೂಲಭೂತವಾದಿಗಳು ದ್ವಂಸ ಮಾಡಿದ್ದಾರೆ. ಹಿಂದೂಗಳನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳುವುದು, ಹಾಗೂ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವ ಕೆಲಸ ಆಗುತ್ತಿದೆ. ಇದಕ್ಕೆ ಮುಖ್ಯ ವಾದ ಕಾರಣ ಗಲ್ಫ್ ದೇಶದ ಹಣ ಸಹಾಯ ಎಂದು ಮಾಹಿತಿ ತಿಳಿದು ಬಂದಿದೆ.

ಬಾಂಗ್ಲಾ ದಲ್ಲಿ ಚುನಾವಣೆ ನಡೆಯುವ ವರೆಗೂ ಮೊಹಮ್ಮದ್‌ ಯೂನಸ್‌ ಅಧಿಕಾರದಲ್ಲಿ ಇರುತ್ತಾರೆ. ಇವರ ಜೊತೆ ಇನ್ನೂ 10 ಜನ ಸಲಹೆಗಾರರು ಅಧಿಕಾರವನ್ನು ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರಿಗೆ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ ಬೆಂಬಲ ಸಹ ಇದೆ.


Share It

You cannot copy content of this page