ಮೈಸೂರು: ದೋಸ್ತಿ ಸರ್ಕಾರಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾದಯಾತ್ರೆಯ ಇಂದು ಮೈಸೂರಿನಲ್ಲಿ ಕೊನೆಗೊಳ್ಳದಿದೆ. ಮೈಸೂರು ಮಹಾ ರಾಜ ಕಾಲೇಜಿನ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ದೋಸ್ತಿ ಸರ್ಕಾರಗಳು ನಡೆಸಲಿವೆ.
“ಮುಡಾ ಹಗರಣ ಮತ್ತು ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಹೆಚ್ಚು. ಅವರು ರಾಜೀನಾಮೆ ನೀಡಬೇಕು ಎಂದು ಕಳೆದ ಒಂದು ವಾರದಿಂದ ಮೈಸೂರಿನಲ್ಲಿ ಪಾದಯಾತ್ರೆ ಮಾಡುತ್ತಿರುವುದಾಗಿ ಹಾಗೂ ಪಾದಯಾತ್ರೆ ಕೊನೆಗೊಳ್ಳುವ ಮುನ್ನ ರಾಜೀನಾಮೆ ನೀಡದೆ ಹೋದರೆ, ಉಗ್ರ ಹೋರಾಟವನ್ನು ನಡೆಸುವುದಾಗಿ ಸಿಎಂ ಸಿದ್ದುಗೆ ಯಡಿಯೂರಪ್ಪ ಎಚ್ಚರಿಗೆ ನೀಡಿದ್ದರು.”
ಇಂದು ಕೊಲಂಬಿಯಾ ಏಷಿಯಾ ಜಂಕ್ಷನ್ನಿಂದ ಬೆಳಗ್ಗೆ 9.35 ಕ್ಕೆ ಪಾದಯಾತ್ರೆ ಆರಂಭವಾಗಿ, 11.30 ಮಹಾರಾಜ ಕಾಲೇಜಿನಲ್ಲಿ ಸೇರಲಿದ್ದಾರೆ. 1 ಲಕ್ಷಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.
ಪ್ರತಿಭಟನೆಯಲ್ಲಿ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಬಿ. ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ. ಟಿ. ದೇವೇಗೌಡ ಭಾಗವಹಿಸಲಿದ್ದಾರೆ.
ಅರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿ “ನಿಮ್ಮ ಉಚಿತ ಗ್ಯಾರಂಟಿ ಗಳಿಗೆ ಈ ಹಣವೇ ಬೇಕಾಗಿತ್ತೆ, ನಿಮ್ಮ 14 ತಿಂಗಳ ಭ್ರಷ್ಟಚಾರವನ್ನು ಪುಸ್ತಕವಾಗಿ ಬಿಡುಗಡೆ ಮಾಡುತ್ತೇವೆ. ಕಾನೂನು ವ್ಯವಸ್ಥೆ ಹಳ್ಳ ಇಡಿದಿದೆ. ಸಿದ್ದರಾಮಯ್ಯ ನೀವು 5 ಗ್ಯಾರಂಟಿ ಗಳ ಜೊತೆ 50 ಗ್ಯಾರಂಟಿಗಳನ್ನ ಕೊಡಿ, ನಮ್ಮ ವಿರೋಧ ಇಲ್ಲ. ಆದರೆ ನಿಮ್ಮ ಹಣವನ್ನು ಸರಿಯಾಗಿ ಬಳಕೆ ಮಾಡಿ ಎಂದು ಹೇಳಿದ್ದಾರೆ.”
