ಚಿತ್ರದುರ್ಗ: ರಾಜ್ಯಸರ್ಕಾರ ಕಾಡು ಗೊಲ್ಲರ ಅಭಿವೃದ್ಧಿ ನಿಗಮ ಮಾಡಿದ್ದರೂ ಕಾಡು ಗೊಲ್ಲರ ನಿಗಮಕ್ಕೆ ಇದುವರೆಗೂ ಒಬ್ಬ ಅಧ್ಯಕ್ಷರನ್ನು ನೇಮಕ ಮಾಡಿಲ್ಲ, ಆದ್ದರಿಂದ ಈ ಕೂಡಲೇ ರಾಜ್ಯಸರ್ಕಾರ ಕಾಡು ಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ಕಾಡು ಗೊಲ್ಲರ ಮುಖಂಡ ಹಾಗೂ ವಕೀಲ ಶಿವು ಯಾದವ್ ಒತ್ತಾಯಿಸಿದ್ದಾರೆ.
ಅವರು ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮಾತನಾಡಿದರು.
“ಸದ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರೇ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅವರೇ ನಿಗಮವನ್ನು ನಡೆಸುತ್ತಿದ್ದಾರೆ, ಇದು ದುರದೃಷ್ಟಕರ ಎಂದು ಕಾಡು ಗೊಲ್ಲರ ಮುಖಂಡ, ವಕೀಲ ಶಿವು ಯಾದವ್ ಅವರು ಪರೋಕ್ಷವಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರನ್ನು ಟೀಕಿಸಿದರು.
