ಕ್ರೀಡೆ ಸುದ್ದಿ

2025 ರ ಐಪಿಎಲ್ ಗೆ ಒಂದು ತಂಡದಲ್ಲಿ ಎಷ್ಟು ಜನ ರೀಟೈನ್ ಆಗಬಹುದು?

Share It

2024 ರ ಐಪಿಎಲ್ ನಲ್ಲಿ ಶ್ರೇಯಸ್ ಐಯ್ಯೇರ್ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ರೋಫಿಯನ್ನು ಗೆದ್ದು ಬೀಗಿತ್ತು. ಇದರ ಬೆನ್ನಲ್ಲೇ 2025ರಲ್ಲಿ ಮೇಗಾ ಆಕ್ಷನ್ ಬರುವ ಕಾರಣ ಒಂದು ತಂಡದಲ್ಲಿ ಎಷ್ಟು ಜನರನ್ನು ಉಳಿಸಿಕೊಳ್ಳಬೇಕು ಎನ್ನುವ ಕುತೂಹಲಗಳು ಎಲ್ಲರಲ್ಲಿ ಮನೆಮಾಡಿತ್ತು.

2024 ಐಪಿಎಲ್ ಮುಗಿದ ಬಳಿಕ ಪಾಯಿಂಟ್ಸ್ ಟೇಬಲ್ ನ ಟಾಪ್ ನಲ್ಲಿ ಕಾಣಿಸಿಕೊಂಡಿದ್ದ ತಂಡಗಳು ನಮಗೆ 8 ಜನರನ್ನು ಉಳಿಸಿಕೊಳ್ಳಲು ಅನುಮತಿ ಕೊಡಿ ಎಂದು ಬಿಸಿಸಿಐ ನ ಬಳಿ ಮನವಿ ಮಾಡಿಕೊಂಡಿದ್ದವು. ಇನ್ನು ಅದೇ ವರ್ಷದಲ್ಲಿ ನೀರಸ ಪ್ರದರ್ಶನ ನೀಡಿ ಪಾಯಿಂಟ್ಸ್ ಟೇಬಲ್ ನಲ್ಲಿ ಕೊನೆಯಲ್ಲಿ ಕಾಣಿಸಿಕೊಂಡಿದ್ದ ಕೆಲವು ತಂಡಗಳು ಯಾವ ತಂಡಗಳೂ ಕೂಡ ಯಾವ ಆಟಗಾರನ್ನು ಉಳಿಸಿಕೊಳ್ಳಬಾರದು ಎಂಬ ಮನವಿ ಮಾಡಿದ್ದವು.

ಇದನ್ನು ಕಂಡ ಬಿಸಿಸಿಐ ಎಲ್ಲಾ ತಂಡಗಳನ್ನು ಸಭೆ ಸೇರಿಸಿ ಚರ್ಚಿಸಿ ಈಗ ಒಂದು ತಂಡ 6 ಜನ ಆಟಗಾರನ್ನು ತಮ್ಮ ತಂಡದಲ್ಲಿಯೇ ಉಳಿಸಿಕೊಳ್ಳಲು ಅವಕಾಶವಿದೆ ಮತ್ತು ಇನ್ನುಳಿದ ಆಟಗಾರರು ಹರಾಜಿಗೆ ಬಿಡಬೇಕು, ಎಂಬ ಆದೇಶವನ್ನು ಬಿಸಿಸಿಐ ಹೊರಡಿಸಿದೆ. ಇದಲ್ಲದೆ ಒಂದು ತಂಡಕ್ಕೆ ಒಂದು RTM (ರೈಟ್ ಟು ಮ್ಯಾಚ್ ) ಕಾರ್ಡ್ ಅನ್ನು ಬಳಸುವ ಅವಕಾಶವಿದೆ ಎಂಬ ಮಾಹಿತಿ ಹರಿದಾಡುತ್ತಿವೆ.

ಈ ಎಲ್ಲಾ ಬೆಳವಣಿಗೆ ಆದ ಬಳಿಕ ತಿಳಿಯುವುದೇನೆಂದರೆ 2025ರ ಐಪಿಎಲ್ ನ ಮೇಗಾ ಹರಾಜಿಗೆ ಒಂದು ತಂಡ ತನ್ನ ಬಳಿ 6-7 ಏಳು ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿವೆ. ಐಪಿಎಲ್ ನ ಹತ್ತು ತಂಡಗಳೂ ಸಹ ತಮ್ಮಲ್ಲಿ ಯಾವ ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ ಎಂದು ಕಾದು ನೋಡ ಬೇಕಾಗಿದೆ.


Share It

You cannot copy content of this page