ಪ್ಯಾರಿಸ್: ಕುಸ್ತಿಪಟು ವಿನೇಶ್ ಪೊಗಟ್ ಪದಕದ ಕುರಿತು ಇಂದು ಬಹುನಿರೀಕ್ಷಿತ ತೀರ್ಪು ಮುನ್ನವೇ ಭಾರತ ಈ ಬಾರಿ ಕೇವಲ 6 ಪದಕ ಪಡೆದು ಪದಕ ಪಟ್ಟಿಯಲ್ಲಿ 70ನೇ ಸ್ಥಾನಿಯಾಗಿ 2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅಭಿಯಾನ ಅಂತ್ಯಗೊಳಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಗೆ ಭಾರೀ ನಿರೀಕ್ಷೆಯೊಂದಿಗೆ ತೆರಳಿದ್ದ ಭಾರತದ 117 ಕ್ರೀಡಾಪಟುಗಳ ತಂಡ 1 ಬೆಳ್ಳಿ, 5 ಕಂಚು ಸೇರಿದಂತೆ 6 ಪದಕದೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಈ ಬಾರಿ ಭಾರತದ ಒಬ್ಬ ಸ್ಪರ್ಧಿಯೂ ಚಿನ್ನದ ಪದಕ ಗೆಲ್ಲದೇ ನಿರಾಸೆ ಮೂಡಿಸಿದರು.
ಇಷ್ಟಾದರೂ ಚಿನ್ನದ ಪದಕ ಭರವಸೆ ಮೂಡಿಸಿದ್ದ ಮಹಿಳಾ ಕುಸ್ತಿಪಟು ವಿನೇಶ್ ಪೊಗಟ್ ಅವರು ಕೇವಲ 100 ಗ್ರಾಂ ಹೆಚ್ಚಿನ ತೂಕ ಹೊಂದಿದ್ದಾರೆಂಬ ಒಲಿಂಪಿಕ್ಸ್ ಸಮಿತಿಯ ವಿವಾದಾತ್ಮಕ ತೀರ್ಪು ಭಾರತದ ಚಿನ್ನದ ಪದಕವನ್ನು ಕಸಿಯಿತು. ಜೊತೆಗೆ ಜಾವೆಲಿನ್ ನಲ್ಲಿ ಕಳೆದ ಟೊಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ರೀತಿಯಲ್ಲೇ ಈ ಬಾರಿಯೂ ಚಿನ್ನದ ಪದಕ ಪಡೆಯುವ ಆಸೆಯನ್ನು ಪಾಕಿಸ್ತಾನದ ಅರ್ಷದ್ ನದೀಂ ವಿಶ್ವದಾಖಲೆಯ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ಗಳಿಸಿದರು.
ಒಟ್ಟಾರೆ ಈ ಮೂಲಕ ಭಾರತ ತಂಡ ಈ ಕೆಲವು ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದರೂ, ಕೆಲವು ವಿಭಾಗಗಳಲ್ಲಿ ನಿರಾಸೆ ಮೂಡಿಸಿತು. ಟೊಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕ ಸೇರಿ 7 ಪದಕ ಗೆದ್ದಿದ್ದ ಭಾರತ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 1 ಬೆಳ್ಳಿ, 5 ಕಂಚಿನ ಪದಕ ಪಡೆದು ಒಟ್ಟಾರೆ ಕೇವಲ 6 ಪದಕಗಳನ್ನು ಗೆದ್ದು ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ 71ನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ ಹಲವಾರು ಕ್ರೀಡಾಪಟುಗಳು ಕೂದಲೆಳೆಯ ಅಂತರದಿಂದ 4ನೇ ಸ್ಥಾನ ಪಡೆದು ಪದಕ ವಂಚಿತರಾದರು.
ಆದರೆ ಮಹಿಳಾ ಶೂಟಿಂಗ್ ನಲ್ಲಿ ಮನು ಭಾಕರ್ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 2 ಕಂಚಿನ ಪದಕ ಗೆದ್ದು 2 ಪದಕ ಗೆದ್ದ ಮೊದಲ ಮಹಿಳೆ ಹಾಗೂ ಶೂಟಿಂಗ್ ನಲ್ಲಿ ಪದಕ ಗೆದ್ದ ಮಮಹಿಳಾ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು. ಆದರೆ 25 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ 4ನೇ ಸ್ಥಾನಕ್ಕೆ ಕುಸಿಯುವ ಮೂಲಕ ಹ್ಯಾಟ್ರಿಕ್ ಪದಕದ ಸಾಧನೆಯ ಹೊಸ್ತಿಲಲ್ಲಿ ಮನು ಭಾಕರ್ ಎಡವಿದರು.
ಇದೇ ಶೂಟಿಂಗ್ ನಲ್ಲಿ ಪುರುಷರ 50 ಮೀ. ರೈಫಲ್ ತ್ರಿ ಪೊಜಿಷನ್ ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದರು. ಒಟ್ಟಾರೆ ಶೂಟಿಂಗ್ ನಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ 3 ಪದಕ ಗೆದ್ದ ಕೀರ್ತಿಗೆ ಭಾರತ ಪಾತ್ರವಾಯಿತು. ಹಾಕಿಯಲ್ಲಿ ಭಾರತ ಫೈನಲ್ ಪ್ರವೇಶಿಸುವ ಅವಕಾಶ ಕೂದಲೆಳೆ ಅಂತರದಿಂದ ಕಳೆದುಕೊಂಡರೂ ಸತತ 2 ಒಲಿಂಪಿಕ್ಸ್ ಗಳಲ್ಲಿ ಕಂಚಿನ ಪದಕ ಗೆದ್ದು 52 ವರ್ಷಗಳ ನಂತರ ಸತತ 2 ಪದಕದ ಸಾಧನೆ ಮಾಡಿ ಸಮಾಧಾನಕ್ಕೆ ಒಳಗಾಯಿತು.
ಅಮನ್ ಶೆರಾವತ್ ಪುರುಷರ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಕುಸ್ತಿಯಲ್ಲಿ ಭಾರತಕ್ಕೆ ಏಕೈಕ ಪದಕ ತಂದುಕೊಟ್ಟರು. ಆರ್ಚರಿ, ವೇಟ್ ಲಿಫ್ಟಿಂಗ್ ಮತ್ತು ಬಾಕ್ಸಿಂಗ್ ನಲ್ಲಿ ಬಹುತೇಕ ಸ್ಪರ್ಧಿಗಳು ಕ್ವಾರ್ಟರ್ ಫೈನಲ್ ಹಂತದಲ್ಲಿ ಮುಗ್ಗರಿಸಿ ಒಂದೂ ಪದಕ ಗೆಲ್ಲದೇ ನಿರಾಸೆ ಮೂಡಿಸಿದರು. ಟೊಕಿಯೊದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಚಾರು ಬಾಯ್ ಈ ಬಾರಿ ಕೇವಲ 1 ಕೆಜಿಯಿಂದ ಕಂಚಿನ ಪದಕ ಗೆಲ್ಲುವ ಅವಕಾಶ ಕಳೆದುಕೊಂಡರು.
ಇಷ್ಟಾದರೂ ಮಹಿಳಾ ವಿಭಾಗದ 50 ಕೆಜಿ ತೂಕದ ಕುಸ್ತಿ ಸ್ಪರ್ಧೆಯಲ್ಲಿ ಕೇವಲ 100 ಗ್ರಾಂ ಹೆಚ್ಚಿನ ತೂಕದ ಆಧಾರದ ಮೇಲೆ ಈ ಬಾರಿಯ ಒಲಿಂಪಿಕ್ಸ್ ನಿಂದಲೇ ಅನರ್ಹಗೊಂಡ ವಿನೇಶ್ ಪೊಗಟ್ ಅವರು ಇಂದು ಭಾನುವಾರ ಬರಲಿರುವ ಒಲಿಂಪಿಕ್ಸ್ ಸಮಿತಿಯ ವಿವಾದಾತ್ಮಕ ತೀರ್ಮಾನದ ಬಗ್ಗೆ ಕೋರ್ಟ್ ತೀರ್ಪು ಹೊರಬೀಳಲಿದೆ. ಒಂದು ವೇಳೆ ವಿನೇಶ್ ಪೊಗಟ್ ಅವರ ಪರವಾಗಿ ಕೋರ್ಟ್ ತೀರ್ಪು ಪ್ರಕಟವಾದರೆ ಆಗ ಮಹಿಳಾ ವಿಭಾಗದ 50 ಕೆಜಿ ತೂಕದ ಸ್ಪರ್ಧೆಯಲ್ಲಿ ಭಾರತದ ವಿನೇಶ್ ಪೊಗಟ್ ಅವರು ಜಂಟಿಯಾಗಿ ಬೆಳ್ಳಿ ಪದಕ ಪಡೆಯುವ ಸಾಧ್ಯತೆ ಇದೆ.