ಕ್ರೀಡೆ ಸುದ್ದಿ

ಪ್ಯಾರಿಸ್ ಒಲಿಂಪಿಕ್ಸ್‌: ವಿನೇಶ್ ಪೊಗಟ್ ಮೇಲ್ಮನವಿ ಅರ್ಜಿ ಬಗ್ಗೆ ಆ.13 ರಂದು ತೀರ್ಪು!

Share It

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದ ಮಹಿಳಾ ಕುಸ್ತಿ ಫೈನಲ್ ನಲ್ಲಿ ಕೇವಲ 100 ಗ್ರಾಂ ದೇಹದ ತೂಕ ಹೆಚ್ಚಾಗಿದೆ ಎಂಬ ಕಾರಣವೊಡ್ಡಿ ಈ ಬಾರಿಯ ಒಲಿಂಪಿಕ್ಸ್‌ನಿಂದಲೇ ಅನರ್ಹರಾದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೊಗಟ್ ಅವರ ಮೇಲ್ಮನವಿ ಅರ್ಜಿಯನ್ನು ವಿವಾರಣೆ ನಡೆಸಿರುವ ಸಿಎಎಸ್ ಇದೇ ಆಗಸ್ಟ್ 13 ರಂದು ಸಂಜೆ 6 ಗಂಟೆಗೆ ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ.

IOA(ಇಂಡಿಯನ್ ಒಲಿಂಪಿಕ್ಸ್‌ ಅಸೋಸಿಯೇಷನ್) ತನ್ನ ಹೇಳಿಕೆಯಲ್ಲಿ, “ಸಿಎಎಸ್‌ನ ತಾತ್ಕಾಲಿಕ ವಿಭಾಗವು ವಿನೇಶ್ ಪೊಗಾಟ್ ವಿರುದ್ಧ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ಮತ್ತು ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿ ವಿಷಯದಲ್ಲಿ ಏಕೈಕ ಆರ್ಬಿಟ್ರೇಟರ್ ಗೌರವಾನ್ವಿತ ಡಾ. ಅನ್ನಾಬೆಲ್ಲೆ ಬೆನೆಟ್‌ಗೆ ಆಗಸ್ಟ್ 13 ರಂದು ಸಂಜೆ 6 ಗಂಟೆಯವರೆಗೆ ನಿರ್ಧಾರವನ್ನು ನೀಡಲು ಸಮಯವನ್ನು ವಿಸ್ತರಿಸಿದೆ” ಎಂದು ಅಧಿಕೃತವಾಗಿ ತಿಳಿಸಿದೆ.


Share It

You cannot copy content of this page