ಸುದ್ದಿ

ಪಂಜಾಬ್ ಪ್ರವಾಹದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬ 9 ಮಂದಿ

Share It

ಚಂಡೀಗಢ: ವರುಣನ ಆರ್ಭಟಕ್ಕೆ ಜೈಜೋನ್ ಚೋ ನದಿ ಉಕ್ಕಿ ಹರಿದಿದ್ದು, ಒಂದೇ ಕುಟುಂಬದ ಎಂಟು ಮಂದಿ ಸೇರಿದಂತೆ ಒಟ್ಟು 9 ಮಂದಿ ಕೊಚ್ಚಿ ಹೋಗಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಪಂಜಾಬ್ ನಲ್ಲಿಯೂ ಪ್ರವಾಹದ ಭೀತಿ ಶುರುವಾಗಿದೆ.

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮಹಿಲ್‌ಪುರ್ ಬ್ಲಾಕ್‌ನಲ್ಲಿ ಸುರಿದ ಭಾರಿ ಮಳೆಗೆ ಕಾರು ಕೊಚ್ಚಿ ಹೋಗಿದೆ. ಮದುವೆಗೆಂದು ಪಂಜಾಬಿನ ಮೆಹ್ರೋವಾಲ್ ನಲ್ಲಿ ಮದುವೆಗೆ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಚಾಲಕ ಸಹಿತ 11 ಮಂದಿ ನೀರು ಪಾಲಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

10 ವರ್ಷದ ವರ್ಷದ ಮಗುವನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೃತರು ಹಿಮಾಚಲ ಪ್ರದೇಶದ ಡೆಹ್ಲಾನ್ ನವರು ಎಂದು ತಿಳಿದು ಬಂದಿದ್ದು ತಂದೆ ಸುರ್ಜಿತ್ ಭಾಟಿಯಾ, ತಾಯಿ ಪರಮ್‌ಜೀತ್ ಕೌರ್, ಚಿಕ್ಕಪ್ಪ ಸರೂಪ್ ಚಂದ್, ಚಿಕ್ಕಮ್ಮ ಬಂಡಾರ್ ಮತ್ತು ಶಿನೋ, ಪುತ್ರಿಯರಾದ ಭಾವನಾ ಮತ್ತು ಅಂಕು ಮೃತಪಟ್ಟಿದ್ದಾರೆ.

ಈ ಬಗ್ಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಮಾತನಾಡಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ಸಹಾಯ ನೀಡುತ್ತೇನೆ ಎಂದು ತಿಳಿಸಿದ್ದಾರೆ.


Share It

You cannot copy content of this page