ಬೆಂಗಳೂರು: ಬಗರ್ ಹುಕುಂ ಅರ್ಜಿ ಕಾನೂನಿನ ಪ್ರಕಾರ ನ್ಯಾಯಸಮ್ಮತವಾಗಿದ್ದರೆ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಲು ಅಧಿಕಾರಿಗಳಿಗೇನು ಸಮಸ್ಯೆ? ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ಅಧಿಕಾರಿಗಳು ಮಾಡುವ ತಪ್ಪಿಗೆ ಜನರ ಎದುರು ಜನಪ್ರತಿನಿಧಿಗಳು ತಲೆತಗ್ಗಿಬೇಕಾ? ಕೆಲಸಕ್ಕೆ ಸೇರಿದ ಮೇಲೆ ಒಮ್ಮೆಯಾದರೂ ಕಾನೂನು ಪುಸ್ತಕ ಓದಿದ್ದೀರಾ? ಎಂದು ಕಿಡಿಕಾರಿದರು.
ಗೋಮಾಳ ಜಮೀನು ಮಂಜೂರಾತಿ ಬಗ್ಗೆ ಕಾನೂನು ಪುಸ್ತಕದಲ್ಲಿ ಸ್ಪಷ್ಟವಾಗಿದೆ. ಅದನ್ನ ಓದಿ ಪಾಲಿಸೋಕೆ ನಿಮಗೇನು ಸಮಸ್ಯೆ?ದಯವಿಟ್ಟು ಮೈಬಗ್ಗಿಸಿ ಕಾನೂನು ಓದಿ ಎಂದು ಅಧಿಕಾರಿಗಳಿಗೆ ಸಚಿವರಿಂದ ಕಾನೂನು ಪಾಠ ಮಾಡಿದರು.