ಶ್ರೀಲಂಕಾ ಪ್ರವಾಸ ಮುಗಿಸಿ ಹೈದ್ರಾಬಾದ್ ಗೆ ಹಿಂತಿರುಗಿರುವ ಟೀಮ್ ಇಂಡಿಯಾದ ವೇಗಿ ಮಹಮದ್ ಸಿರಾಜ್. ತನ್ನ ಕುಟುಂಬಕ್ಕೋಸ್ಕರ ಬರೋಬ್ಬರಿ ಮೂರು ಕೋಟಿ ವೆಚ್ಚದ ದುಬಾರಿ ಕಾರು ಖರೀದಿಸುವುದರ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕಾದನ ಪಂದ್ಯದಲ್ಲಿ ಆಟವಾಡಿದ ವೇಗಿ ಮಹಮದ್ ಸಿರಾಜ್ ಇನ್ನು ಬಾಂಗ್ಲಾ ದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮದ್ಯದಲ್ಲಿ ತನ್ನ ತವರಿಗೆ ಹಿಂತಿರುಗಿರುವ ಸಿರಾಜ್ ತನ್ನ ಕುಟುಂಬಕ್ಕೆದು ಕಪ್ಪು ಬಣ್ಣದ ಲ್ಯಾಂಡ್ ರೋವರ್ ಕಾರನ್ನು ಬರೋಬ್ಬರಿ ಮೂರು ಕೋಟಿ ಕೊಟ್ಟು ಖರೀದಿಸಿದ್ದಾರೆ.
ಕಾರ್ ಖರೀದಿ ಮಾಡಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ” ಕನಸುಗಳಿಗೆ ಮಿತಿ ಎಂಬುದೇ ಇಲ್ಲ”. ನನ್ನ ಕನಸಿನ ಕಾರಿನ ಖರೀದಿ ಯಶಸ್ವಿಯಾಗಿದ್ದಕ್ಕೆ ನಾನು ದೇವರಿಗೆ ಧನ್ಯವಾದ ತಿಳಿಸುತ್ತೇನೆ. ನಿನ್ನಲ್ಲಿ ನೀನು ನಂಬಿಕೆ ಇಟ್ಟುಕೊಂಡರೆ ನೀನು ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವೇಗಿ ಮಹಮದ್ ಸಿರಾಜ್ ಐಪಿಎಲ್ ನಲ್ಲಿ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಟವಾಡುತ್ತಿದ್ದಾರೆ. ಕಳೆದ ವರ್ಷ ಆರ್ ಸಿಬಿ ಸಿರಾಜ್ ಅವರನ್ನು 7 ಕೋಟಿ ಕೊಟ್ಟು ತನ್ನಲ್ಲೇ ಉಳಿಸಿಕೊಂಡಿತ್ತು. ಈ ವರ್ಷವೂ ಸಹ ಆರ್ ಸಿಬಿ ಪರವಾಗಿಯೇ ಸಿರಾಜ್ ಆಟವಾಡುವ ನಿರೀಕ್ಷೆಗಳು ಹೆಚ್ಚಾಗಿ ಕಾಣುತ್ತಿವೆ.