ಉತ್ತರ ಪ್ರದೇಶ : ಗೋರಖ್‌ಪುರದ ವಾಸಿಯಾಗಿರುವ 46 ವರ್ಷ ವಯಸ್ಸಿನ ರಾಜಗೀರ್ ಮಿಸ್ತ್ರಿ ಹಾರ್ನಿಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು ಅವರ ದೇಹದಲ್ಲಿ ಮಹಿಳಾ ಸಂತಾನೋತ್ಪತ್ತಿ ಅಂಗಗಳು ಪತ್ತೆಯಾಗಿರುವುದು ವೈದ್ಯರಲ್ಲಿ ಅಚ್ಚರಿಯನ್ನು ಮೂಡಿಸಿದೆ.
ರಾಜಗೀರ್ ಮಿಸ್ತ್ರಿ ಯವರು ಎರಡು ಮಕ್ಕಳ ತಂದೆಯಾಗಿದ್ದು ಕೇಳ ದಿನಗಳಿಂದ ತೀವ್ರ ಹೊಟ್ಟೆ ನೋವು ಅನುಭವಿಸುತ್ತಿದ್ದರು. ಇದಕ್ಕೆ ವೈದ್ಯರ ಬಳಿ ಹೋದಾಗ ಅವರು ಅಲ್ಟ್ರಾಸೌಂಡ್ ನಲ್ಲಿ ಪರೀಕ್ಷೆ ನಡಿಸಿದ್ದಾರೆ. ಆಗ ಅಲ್ಲಿ ಮಾಂಸದ ತುಂಡು ಅವರ ಕಿಬ್ಬೊಟ್ಟೆಯ ಮೇಲೆ ಒತ್ತಡ ಬೀರುತ್ತಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಹರ್ನಿಯಾ ಚಿಕಿತ್ಸಾ ಶಿಬಿರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಆರ್‌ಡಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ನರೇಂದ್ರ ದೇವ್ ಅವರ ಪರೀಕ್ಷೆಯಿಂದ ಅವರಲ್ಲಿ ಹರ್ನಿಯಾ ಇರುವುದನ್ನು ಪತ್ತೆ ಮಾಡಿದ್ದಾರೆ.
” ಕಿಬ್ಬೊಟ್ಟೆಯ ಕೆಳಗೆ ವಿಸ್ತರಿಸಿರುವ ಮಾಂಸದ ತುಂಡು ಅಭಿರುದ್ಧಿಯಾಗ ಗರ್ಭಕೋಶವಿದೆ. ಸಮೀಪದಲ್ಲೇ ಅಂಡಾಶಯ ವಿದೆ. ಮಿಸ್ತ್ರಿ ಯು ಬಾಹ್ಯವಾಗಿ ಯಾವುದೇ ಹುಡುಗಿಯ ಸ್ವಭಾವವನ್ನು ಹೊಂದಿಲ್ಲ. ಇದು ಅಪರೂಪದ ಜನ್ಮ ವಾಗಿದೆ. ಹಾಗೂ ಶಸ್ತ್ರ ಚಿಕಿತ್ಸೆಯ ನಂತರ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.”