ಈ ಬಾರಿಯ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದ ಹಾಗೂ 92. 97 ಮೀಟರ್ ನ ದಾಖಲೆಯನ್ನು ಅರ್ಷದ್ ನದೀಮ್ ಮುರಿದಿದ್ದಾರೆ. ಈ ಕ್ಷಣವನ್ನು ನದೀಮ್ ರವರ ಮಾವ ಮೊಹಮ್ಮದ್ ನವಾಜ್ ನದೀಮ್ ಗೆ ಎಮ್ಮೆಯನ್ನು ಉಡುಗೊರೆಯಾಗಿ ನೀಡುವ ಮೂಲಕ ಸಂಭ್ರಮಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನದೀಮ್ ” ನಮ್ಮ ಗ್ರಾಮೀಣ ಸಮುದಾಯದಲ್ಲಿ ಎಮ್ಮೆಯನ್ನು ಕೊಡುವುದು ಅತ್ಯಂತ ಗೌರವದ ಹಾಗೂ ಮೌಲ್ಯಯುತ ಎಂದು “ಹೇಳಿದ್ದಾರೆ. ನಾವಜ್ 4 ಮಂದಿ ಪುತ್ರರು ಮತ್ತು 3 ಮಂದಿ ಪುತ್ರಿಯರನ್ನು ಹೊಂದಿದ್ದು ಸ್ಥಳೀಯ ಸಾಂಪ್ರದಾಯಿಕವಾಗಿ ಎಮ್ಮೆಯನ್ನು ನೀಡಿದ್ದಾರೆ. ನವಾಜ್ ಅವರ ಮಗಳು ಆಯೇಷಾರನ್ನು ನದೀಮ್ ಮದುವೆಯಾಗಿದ್ದು ಅವರಿಗೆ ಇಬ್ಬರು ಪುತ್ರರು ಮತ್ತು ಪುತ್ರಿಯರು ಇದ್ದಾರೆ.
ಸಂಭ್ರಮವನ್ನು ಹಂಚಿಕೊಂಡ ನವಾಜ್ “ಕಳೆದ ಆರು ವರ್ಷಗಳ ಹಿಂದೆ ನನ್ನ ಮಗಳನ್ನು ನದೀಮ್ ಗೆ ವಿವಾಹ ಮಾಡಿ ಕೊಟ್ಟೆ. ಅವರಿಗೆ ಕ್ರೀಡೆಯಲ್ಲಿ ಅಪಾರ ಆಸಕ್ತಿ ಇತ್ತು. ಇದಕ್ಕೂ ಮುನ್ನ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಹೊಲ ಗದ್ದೆಯಲ್ಲಿ ಅಭ್ಯಾಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ”
ಒಂದು ಸಣ್ಣ ಹಳ್ಳಿಯ ಹುಡುಗ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವುದು ಅವರ ಗ್ರಾಮಕ್ಕೆ ಆಗು ಸಮುದಾಯಕ್ಕೆ ಪ್ರೇರಣೆ ನೀಡಿದೆ.