ಇಂಡಿಯನ್ ಪ್ರೀಮಿ ಲೀಗ್ (ಐಪಿಎಲ್ ), ವುಮೆನ್ಸ್ ಪ್ರೀಮಿರ್ ಲೀಗ್ (ಡಬ್ಲ್ಯೂ ಪಿಎಲ್ ) ಈಗಾಗಲೇ ಜಗತ್ತಿನಾದ್ಯಂತ ಹೆಚ್ಚು ಜನಪ್ರಿಯವಾಗಿವೆ. ಈ ಲೀಗ್ ಗಳಿಂದ ಬಿಸಿಸಿಐ ಕೂಡ ಹೆಚ್ಚು ಆದಾಯ ಗಳಿಸಿ ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದೇ ಹೆಸರುವಾಸಿಯಾಗಿದೆ.
ಈ ಸಂದರ್ಭದಲ್ಲಿ ಬಿಸಿಸಿಐ ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಜಗತ್ತಿನ ಶ್ರೀಮಂತ ಲೀಗ್ ಗಳಾದ ಐಪಿಎಲ್ ಮತ್ತು ಡಬ್ಲ್ಯೂ ಪಿ ಎಲ್ ನಂತೆಯೇ ಮತ್ತೊಂದು ಲೆಜೆಂಡ್ಸ್ ಪ್ರೀಮಿರ್ ಲೀಗ್ ( ಎಲ್ ಪಿ ಎಲ್ ) ಹೆಸರಿನ ಮತ್ತೊಂದು ಲೀಗ್ ಅನ್ನು ಪರಿಚಯಿಸುವ ಮಹಾತ್ವದ ನಿರ್ಧಾರ ಕೈಗೊಂಡಿದೆ.
ಈಗಾಗಲೇ ಲೆಜೆಂಡ್ಸ್ ಗಳಿಗೆಂದೇ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್, ಲೆಜೆಂಡ್ಸ್ ಲೀಗ್ ಕ್ರಿಕೆಟ್, ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಮತ್ತು ಗ್ಲೋಬಲ್ ಲೆಜೆಂಡ್ಸ್ ನಂತಹ ಹಲವು ಲೀಗ್ ಗಳು ಚಾಲ್ತಿಯಲ್ಲಿವೆ. ಇವುಗಳ ನಡುವೆಯೇ ಲೆಜೆಂಡ್ಸ್ ಪ್ರೀಮಿರ್ ಲೀಗ್ ಅನ್ನು ಮುಂದಿನ ವರ್ಷದ ಆರಂಭದಲ್ಲಿ ಹೊರತರುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಈ ಲೀಗ್ ಏನಾದರೂ ಚಾಲ್ತಿಗೆ ಬಂದರೆ ಸಚಿನ್ ತೆಂಡೂಲ್ಕರ್, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್, ವೀರೇಂದ್ರ ಸೇಹ್ವಾಗ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ನಂತಹ ಹಲವು ಜನಪ್ರಿಯ ಆಟಗಾರರು ಬ್ಯಾಟು ಬಾಲ್ ಹಿಡಿದು ಮೈದಾನಕ್ಕೆ ಇಳಿಯುವ ಸಾಧ್ಯತೆ ಇದೆ. ಇನ್ನೊಂದೆಡೆ ಇರುವ ಲೆಜೆಂಡ್ಸ್ ಲೀಗ್ ಗಳು ಮೂಲೆ ಗುಂಪಾಗುವದರಲ್ಲಿ ಅನುಮಾನವೇ ಇಲ್ಲ.