ಬಿಸಿಸಿಐಯು ಬೂಮ್ರಗೆ ದುಲೀಪ್ ಟ್ರೋಫಿಯಿಂದ ವಿಶ್ರಾಂತಿ ನೀಡಿದೆ. ವೇಗಿ ಬೂಮ್ರಾ ಮುಂಬರುವ ಬಾಂಗ್ಲಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡುವುದು ಬಾವುತೇಕ ಖಚಿತ ಎನ್ನಲಾಗಿದೆ.
ಬೂಮ್ರಾ 2024ರ ವಿಶ್ವ ಕಪ್ ನಲ್ಲಿ ಬಿಟ್ಟರೆ ಇನ್ನು ಯಾವ ಸರಣಿಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಆದ್ದರಿಂದ ಜಸ್ಪ್ರೀತ್ ಬೂಮ್ರಾ ಅವರ ಕಾರ್ಯ ಒತ್ತಡ ಕಡಿಮೆ ಮಾಡುವ ಸಲುವಾಗಿ ಆಯ್ಕೆ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ಪ್ರಮುಖ ಪಾತ್ರ ವಹಿಸುವ ಕಾರಣ ಅವರಿಗೆ ವಿಶ್ರಾಂತಿ ಅವಶ್ಯಕ ಎಂದು ತಿಳಿಸಿದ್ದಾರೆ.
ಇನ್ನು ಟೀಮ್ ಇಂಡಿಯಾದ ಮತ್ತೊಬ್ಬ ವೇಗಿ ಮಹಮದ್ ಶಾಮಿಯ ವಿಷಯಕ್ಕೆ ಬಂದರೆ ಶಮಿ ಕಂಬ್ಯಾಕ್ ಯಾವಾಗ ಎನ್ನುವುದು ಗೊಂದಲವಾಗಿದೆ. ಶಮಿ ದುಲೀಪ್ ಟ್ರೋಫಿಯಿಂದಲೂ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.
ಈಗ ಲಭ್ಯವಾಗಿರುವ ವರದಿಗಳ ಪ್ರಕಾರ ಸದ್ಯದಲ್ಲಿ ಮೊಹಮ್ಮದ್ ಶಮಿ ಬೆಂಗಳೂರಿನ ಎನ್‌ಸಿಎ ಯಲ್ಲಿ ಅಭ್ಯಾಸ ಪ್ರಾರಂಭಿಸಿದ್ದು ಅವರು ನ್ಯೂಜಿಲ್ಯಾಂಡ್ ಅಥವಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಪರ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆಗಳು ಹೆಚ್ಚಾಗಿ ಕಾಣುತ್ತಿವೆ.