ಬೆಂಗಳೂರು : ಇಂದು ಶ್ರಾವಣ ಮಾಸದ ಎರಡನೇ ಶುಕ್ರವಾರ. ಈ ವಾರದಂದ್ದು ನಾಡಿನೆಲ್ಲಡೆ ಶ್ರೀ ವರ ಮಹಾಲಕ್ಷ್ಮೀ ವ್ರತವನ್ನು, ನಾಡಿನಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಅಲ್ಲದೆ ಈ ವರ ಮಹಾಲಕ್ಷ್ಮೀ ವೃತಾಚರಣೆ ಹಿನ್ನೆಲೆ, ನಗರದ ಕೆ ಆರ್ ಮಾರುಕಟ್ಟೆ ಸೇರಿದಂತೆ, ನಗರದ ಎಲ್ಲ ಪ್ರಮುಖ ಬಡಾವಣೆಗಳಲ್ಲಿ ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ಇಂದು ಮುಂಜಾನೆ ಯಿಂದಲೇ ಜೋರಾಗಿತ್ತು. ಬೆಲೆ ಏರಿಕೆಯ ಬಿಸಿ ಮಧ್ಯೆ,ಮುಂಜಾನೆಯೇ ಸಡಗರದಲ್ಲಿ ಹೂವು ಮತ್ತು ಹಣ್ಣು ಹಂಪಲುಗಳನ್ನು ಜನ ಖರೀದಿಸಿದ್ದು ವಿಶೇಷವಾಗಿತ್ತು.
ಈ ವರಲಕ್ಷ್ಮೀ ಹಬ್ಬವು ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿರುವ ಹಬ್ಬವಾಗಿದ್ದು ಸಂಪತ್ತು ಮತ್ತು ಸಮೃದ್ಧಿಯ ಪ್ರತೀಕವಾದ, ವರ ಲಕ್ಷ್ಮೀಯನ್ನು ಇಂದು, ವಿಶೇಷವಾಗಿ ಅಲಂಕರಿಸಿ ಪೂಜಿಸುತ್ತಾರೆ ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾಡಿನ ಸಮಸ್ತ ಜನತೆಗೆ ಶ್ರೀವರ ಮಹಾಲಕ್ಷ್ಮಿ ಮಾತೆ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ, ಆಯುರಾರೋಗ್ಯ ನೀಡಿ ಹರಸಲಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಪ್ರಾರ್ಥಿಸಿದ್ದಾರೆ.