ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರವ ಬಿಜೆಪಿ ಜೆಡಿಎಸ್ ವಿರುದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರಿತು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಭ್ರಷ್ಟಾಚಾರ ಕಿರಿಟ ತೊಟ್ಟವರು ಬಿ.ಎಸ್ ಯಡಿಯೂರಪ್ಪ ಅವರಿಂದ ನೈತಿಕತೆ ಕಲಿಬೇಕಾ ಯಾವ ಅಧಿಕಾರ ಇಲ್ಲದೇ ವಿಜಯೇಂದ್ರ ಭ್ರಷ್ಟಾಚಾರ ಮಾಡಿದ್ದಾರೆ. ವಿಜಯೇಂದ್ರರಿಂದ ನೈತಿಕತೆ ಕಲಿಬೇಕಾ ಎಂದು ಆಕ್ರೋಶಗೊಂಡರು.
ಇದೇ ವೇಳೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ದವೂ ಕಿಡಿಕಾರಿದ ದಿನೇಶ್ ಗುಂಡೂರಾವ್, ಹೆಚ್ಡಿಕೆ ಬರೀ ಇಂತಹದ್ದೇ ಕೆಟ್ಟ ಕೆಲಸಗಳನ್ನೇ ಮಾಡೋದು. ಕೆಟ್ಟ ಕೆಲಸ ಮಾಡಿ ಒಂದುವರೆ ವರ್ಷಕ್ಕಿಂತ ಜಾಸ್ತಿ ಸಿಎಂ ಆಗಲಿಲ್ಲ. ಬರೀ ಪಿತೂರಿ ಮಾಡೋದೆ ಹೆಚ್.ಡಿ ಕುಮಾರಸ್ವಾಮಿ ಕೆಲಸ ಎಂದರು

