ಹೊಸದಿಲ್ಲಿ : ಒಲಂಪಿಕ್ಸ್ ನಿಂದ ವಿವಾದಾತ್ಮಕವಾಗಿ ಹೊರಬಿದ್ದ ವಿನೇಶ್ ಫೋಗಟ್ ಭಾರತಕ್ಕೆ ನಿರಾಸೆಯಿಂದ ಮರಳಿದ ಬಳಿಕ ವಿವಿಧ ಸಂಸ್ಥೆಗಳಿಂದ 16 ಕೋಟಿ ನಗುದು ಬಹುಮಾನ ಬಂದಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಆಕೆಯ ಪತಿ ಸೋಮವೀರ್ ರಾಥೀ ಪ್ರತಿಕ್ರಿಯೆ ನೀಡಿ.” ಇವೆಲ್ಲವೂ ಸುಳ್ಳು ಸುದ್ದಿ. ಯಾವುದೇ ಸಂಸ್ಥೆಗಳು, ಉದ್ಯಮಿಗಳಿಂದ ಹಣವನ್ನು ಪಡೆದಿಲ್ಲ. ನೀವೆಲ್ಲರೂ ನಮ್ಮವರು, ಈ ರೀತಿಯಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಎಕ್ಸ್ ನಲ್ಲಿ ಹಚ್ಚಿಕೊಂಡಿದ್ದಾರೆ.” ಈ ರೀತಿಯ ಆಧಾರ ರಹಿತ ಮಾಹಿತಿ ಜನರನ್ನು ದಾರಿ ತಪ್ಪಿಸುತ್ತವೆ. ಸಮಗ್ರತೆ ಹಾಳು ಮಾಡುತ್ತವೆ.
ಒಲಂಪಿಕ್ಸ್ ಮುಗಿಸಿಕೊಂಡು ಬಂದ ವಿನೇಶ್ ಫೋಗಟ್ ಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಜೊತೆಗೆ ತನ್ನ ಸ್ವಗ್ರಾಮದಲ್ಲಿ ಒಳ್ಳೆಯ ಸತ್ಕಾರವೆ ದೊರೆತಿದೆ. ಸೋಮವಾರ ತನ್ನ ಸಹೋದರರೊಂದಿಗೆ ರಕ್ಷಾ ಬಂಧನದ ಆಚರಣೆ ಮಾಡಿದ್ದಾರೆ.