ಬರೇಲಿ: ಮೊರಾದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ 20 ವರ್ಷದ ನರ್ಸ್ ಮೇಲೆ ವೈದ್ಯನೊಬ್ಬ ಅತ್ಯಾಚಾರವೆಸಗಿದ್ದು, ವಾರ್ಡ್ ಬಾಯ್ ಹಾಗೂ ಮತ್ತೊಬ್ಬ ನರ್ಸ್ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ದಲಿತೆ ಆಗಿದ್ದು ದಿಲಾರಿ ವ್ಯಾಪ್ತಿಯ ಹಳ್ಳಿಯವರಾಗಿದ್ದಾರೆ. ಡಾ. ಮೊಹಮ್ಮದ್ ಶಹನವಾಜ್ ಆಸ್ಪತ್ರೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಆಯುಕ್ತ ಸಂದೀಪ ಕುಮಾರ್ ಮೀನ ತಿಳಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾದ ಮೂವರನ್ನು ಕಾನೂನಿಗೆ ಒಪ್ಪಿಸಲಾಗಿದೆ. ಬಿಎನ್ ಎಸ್ ಸಂಹಿತೆ 61-2,64,151-2, 127-2 ಮತ್ತು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಕಾನೂನಿನಿಂದ ಕೇಸ್ ಬುಕ್ ಮಾಡಲಾಗಿದೆ.
ಸದ್ಯ ಆಸ್ಪತ್ರೆಯನ್ನು ಮುಚ್ಚಲಾಗಿದೆ. ಪೋಲಿಸರು ಸಾಕ್ಯಗಳನ್ನು ಹುಡುಕುತಿದ್ದಾರೆ.
ಶನಿವಾರ ಸಂಜೆ ಜುನೈದ್ ವೈದ್ಯರ ಕ್ಯಾಬಿನ್ ಗೆ ಹೋಗುವಂತೆ ಹೇಳಿದ್ದಾನೆ. ಬಳಿಕ ಮತ್ತೊಬ್ಬ ನರ್ಸ್ ಆಕೆಯನ್ನು ಕ್ಯಾಬಿನ್ ಒಳಗೆ ಕರೆದೊಯ್ದು ಲಾಕ್ ಮಾಡಿದ್ದಾರೆ. ಅತ್ಯಾಚಾರ ಎಸಗಿದ ಮೇಲೆ ಆಕೆಗೆ ಹಣ ಕೊಡಲು ಮುಂದಾಗಿದ್ದಾರೆ ಎಂದು ಪೊಲೀಸ್ ಮಾಹಿತಿ ತಿಳಿಸಿದೆ. ಬಳಿಕ ಭಾನುವಾರ ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

