ಶಿವಮೊಗ್ಗ: ಭದ್ರಾವತಿ ಶಾಸಕ ಸಂಗಮೇಶ ಪುತ್ರನ ಕೊಲೆಗೆ ಸಂಚು ರೂಪಿಸಿದ್ದ ತಂಡವನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭದ್ರಾವತಿ ಶಾಸಕ ಸಂಗಮೇಶ್ ಪುತ್ರ ಬಸವೇಶನ ಕೊಲೆ ಮಾಡಲು ಡಿಚ್ಚಿ ಮುಬಾರಕ್ ಎಂಬ ರೌಡಿಶೀಟರ್ ಸುಫಾರಿ ನೀಡಿದ್ದ ಎನ್ನಲಾಗಿದೆ. ಜೈಲಿನಲ್ಲಿದ್ದುಕೊಂಡೇ ಸ್ಕೆಚ್ ಹಾಕಿದ್ದ ಮುಬಾರಕ್, ಅದಕ್ಕಾಗಿ, ಮತ್ತೊಬ್ಬ ಮುಬಾರಕ್ ಎಂಬಾತನನ್ನು ಬುಕ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಭದ್ರಾವತಿ ಗಾಂಧಿ ಸರ್ಕಲ್ ನಲ್ಲಿಯೇ ಹತ್ಯೆ ಮಾಡಬೇಕು ಎಂದು ಗ್ಯಾಂಗ್ ಗೆ ಸೂಚನೆ ನೀಡಿದ್ದ, ಇದಕ್ಕಾಗಿ ಮುಬಾರಕ್ ಮತ್ತು ತಂಡಕ್ಕೆ ಹಣಕಾಸಿನ ನೆರವನ್ನು ನೀಡಿದ್ದ. ಹತ್ಯೆಗಾಗಿ ಚಾಕು ಖರೀದಿ ಮಾಡಿರುವುದಾಗಿ, ಡಿಚ್ಚಿ ಮುಬಾರಕ್ ತನಗೆ ಡೀಲ್ ಕೊಟ್ಟಿರುವುದಾಗಿ ಆತ ಕೆಲವರ ಬಳಿ ಹೇಳಿಕೊಂಡಿದ್ದ.
ಡಿಚ್ಚಿ ಮುಬಾರಕ್ ಮತ್ತು ಮುಬಾರಕ್ ಸೇರಿ ಇತರರನ್ನು ಬಂಧಿಸಿರುವ ಭದ್ರಾವತಿ ಪೊಲೀಸರು, ಶಾಸಕ ಸಂಗಮೇಶ್ ಪುತ್ರನಿಗೆ ಭದ್ರತೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

