ಕೆಎಫ್‌ಸಿ ಸೇರಿ ನಾಲ್ಕು ಆಹಾರ ಮಳಿಗೆಗಳ ಲೈಸೆನ್ಸ್ ಅಮಾನತು

Share It

ಮಂಗಳೂರು: “ಆಹಾರ ಅಸುರಕ್ಷತೆ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈಗಾಗಲೇ ಬೆಂಗಳೂರಿನ ಕೆಎಫ್‌ಸಿಯ ಒಂದು ಮಳಿಗೆ ಸೇರಿ ನಾಲ್ಕು ಆಹಾರ ಸಂಸ್ಥೆ ಲೈಸೆನ್ಸ್ ಅಮಾನತು ಮಾಲಾಗಿದೆ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು “ಆಹಾರ ಸುರಕ್ಷಿತವಾಗಿ ಜನರಿಗೆ ಸಿಗಬೇಕು. ಆಹಾರದ ತಯಾರಿಕೆ ಹೇಗಾಗುತ್ತದೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಬೇಕು. ಪ್ರತಿ ತಿಂಗಳು ವಿಶೇಷ ಡ್ರೈವ್ ಮಾಡಬೇಕು. ರೆಸ್ಟೋರೆಂಟ್, ಆಹಾರ ತಯಾರಿಕಾ ಕೇಂದ್ರದಲ್ಲಿ ತಪಾಸಣೆ ನಡೆಸಬೇಕು ಎಂದು ಸೂಚಿಸಲಾಗಿದೆ” ಎಂದರು.

ಪ್ರತಿ ತಿಂಗಳು ಈ ಬಗ್ಗೆ ರಿಪೋರ್ಟ್ ಮಾಡಿ ಮಾಧ್ಯಮಕ್ಕೆ ಬಿಡುಗಡೆ ಮಾಡಬೇಕು. ಮಾಂಸದAಗಡಿ, ಆಹಾರದ ಉದ್ದಿಮೆಗಳನ್ನು ತಪಾಸಣೆ ನಡೆಸಬೇಕು. ಯಾವ ರೀತಿ ಕಲಬೆರಕೆ ಮಾಡುತ್ತಾರೆ. ಅಸುರಕ್ಷಿತ ಆಹಾರ ಕೊಡುತ್ತಿದ್ದಾರೆ ಎಂಬುದು ಜನರಿಗೆ ತಿಳಿಯಬೇಕು” ಎಂದರು.

“ಆಗಸ್ಟ್ನಲ್ಲಿ ಕೇಕ್, ಕೋವ ಬಗ್ಗೆ ತಪಾಸಣೆ ನಡೆಸಲಾಗಿತ್ತು. ಮುಂದಿನ ತಿಂಗಳು ಬೇರೆ ತಪಾಸಣೆ ನಡೆಯಲಿದೆ. ಈ ಮೊದಲು ಕಬಾಬ್, ಗೋಬಿ ಮಂಚೂರಿಗೆ ಕಲರ್ ಹಾಕಿರುವುದು ತಿಳಿದು ಬಂದಿತ್ತು. ತಯಾರು ಮಾಡುವವರಿಗೆ ಇದು ತಪ್ಪು ಎಂದು ಗೊತ್ತಿರುವುದಿಲ್ಲ. ಮಾರಾಟ ಬೇಗ ಆಗಲು ಇದೆಲ್ಲ ಮಾಡುತ್ತಿರುತ್ತಾರೆ. ಈ ಬಗ್ಗೆ ಅವರಿಗೂ ಮಾಹಿತಿ ಕೊಡುತ್ತೇವೆ” ಎಂದರು.


Share It

You May Have Missed

You cannot copy content of this page