324 ನಗರಗಳಲ್ಲಿ ಖಾಸಗಿ ಎಫ್ಎಂ ಸ್ಥಾಪನೆಗೆ ಕೇಂದ್ರ ಸರಕಾರ ತೀರ್ಮಾನ

Share It

ಹೊಸದಿಲ್ಲಿ: ದೇಶದ ಎರಡನೇ ದರ್ಜೆಯ ನಗರಗಳಲ್ಲಿ ಖಾಸಗಿ ಎಫ್ ಎಂ ವಾಹಿನಿಗಳನ್ನು ತೆರೆಯಲು ಕೇಂದ್ರ ಸರಕಾರ ತೀರ್ಮಾನಿಸಿದ್ದು, ಅದಕ್ಕಾಗಿ ಕ್ಯಾಬಿನೆಟ್ ನಲ್ಲಿ 784.87 ಕೋಟಿ ರು. ಅನುದಾನ ನಿಗದಿಮಾಡಿದೆ.

ಖಾಸಗಿ ಸಹಭಾಗಿತ್ವದಲ್ಲಿ ಎಫ್ಎಂ ವಾಹಿನಿ ಆರಂಭಿಸಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು, ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಪಸರಿಸುವುದು ಇದರ ಉದ್ದೇಶ ಎಂದು ಹೇಳಲಾಗಿದೆ.

ಖಾಸಗಿ ಎಫ್ಎಂ ರೇಡಿಯೋ ಪಾಲಿಸಿ-3 ನ ಭಾಗವಾಗಿ 234 ನಗರಗಳಲ್ಲಿ ಎಫ್ಎಂ ರೇಡಿಯೋ ಶುರುವಾಗಲಿವೆ. ಈ ನಗರಗಳಲ್ಲಿ 730 ಚಾನೆಲ್ ಗಳನ್ನು ಆರಂಭಿಸಲು ಸರಕಾರ ಅಗತ್ಯ ಅನುದಾನ ನೀಡಲಿದೆ.

ಪ್ರಮುಖವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎಡಪಂಥೀಯ ವಿಚಾರಧಾರೆಗಳ ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕೇಂದ್ರ ಸರಕಾರದ ಸಾಧನೆಗಳನ್ನು ಪಸರಿಸಲು ಎಫ್ಎಂ ಚಾನೆಲ್ ಗಳನ್ನು ಆರಂಭಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.


Share It

You May Have Missed

You cannot copy content of this page