ಅಣ್ಣಿಗೇರಿ: ನಗರದ ಹೃದಯ ಭಾಗದಲ್ಲಿ ದಿನನಿತ್ಯ ಸಾರ್ವಜನಿಕರ ಗೋಳ ಕೇಳತಿರದಂತಾಗಿದೆ. ಅಣ್ಣಿಗೇರಿ ಬಸ್ ನಿಲ್ದಾಣದಿಂದ ಹಿಡಿದು ಕೆನರಾ ಬ್ಯಾಂಕ್ ಸ್ಟೇಟ್ ಬ್ಯಾಂಕ ಹಾಗೂ ಜಿನ್ನಿಂಗ್ ಮಿಲ್ ಗಳ ಮುಂದೆ ಸಾಲು ಸಾಲು ಗುಂಡಿಗಳನ್ನು ನೋಡಿ ವಾಹನ ಸವಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಣ್ಣಿಗೇರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರಿಕೊಂಡಿರುವ ರಸ್ತೆ ತುಂಬ ಗುಂಡಿಯಿಂದ ಕೂಡಿ ಸಾರ್ವಜನಿಕರಿಗೆ ಕಿರಿಕಿರಿಯಾಗಿ ಅನಾಹುತಕ್ಕೆ ದಾರಿ ಆಗಿತ್ತಾದರು ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.
ಪತ್ರಕರ್ತರಾದ ಮಹಾಂತೇಶ ಹಕ್ಕರಕಿ, ಹೇಮಂತ ಕುರಹಟ್ಟಿ, ರಫಿಕ ಕಲೆಗಾರ, ಕಿರಣ ಪೂಜಾರ ಸಹಯೋಗದೊಂದಿಗೆ ಸೋಮವಾರ 2 ಟಿಪ್ಪರ್ ಮುಖಾಂತರ ಮೋಹರ್ಂ ನಿಂದ ಗುಂಡಿಗಳನ್ನು ಮುಚ್ಚಲಾಗಿದೆ ಅದಕ್ಕಾಗಿ ಸಾರ್ವಜನಿಕರಿಂದ ಪತ್ರಕರ್ತರಿಗೆ ಪ್ರಶಂಸೆ ವ್ಯಕ್ತಪಡಿಸಿದರು .
ಹಲವಾರು ಬಾರಿ ಕೋಟ್ಟ ಮನವಿಗಳು ಕಸದ ಬುಟ್ಟಿ ಸೇರಿವೇ ಇದಕ್ಕೆ ಸಮಂಧ ಪಟ್ಟ ಅಧಿಕಾರಿಗಳು ಕ್ಯಾರಿ ಎನ್ನದೆ ಕೂತಿದ್ದಾರೆ.ಶಾಸಕರು ಇತ್ತ ಕಡೆ ಗಮನವೆ ಹರಿಸುತ್ತಿಲ್ಲ ವಾರದೋಳಗಾಗಿ ಕಾರ್ಯ ಪ್ರಾರಂಭ ವಾಗದಿದ್ದರೆ ರಸ್ತೆ ತಡೆ ನೆಡಸಿ ಹೋರಾಟ ಮಾಡಲಾಗುವದು
- ಹೇಮಂತ ಕುರಹಟ್ಟಿ, ಪತ್ರಕರ್ತ
ಈ ಕ್ಷೇತ್ರದ ಶಾಸಕ ಎನ್ ಎಚ್ ಕೋನರಡ್ಡಿ ಚಕ್ಕಡಿ ದಾರಿಗೆ ವತ್ತು ನೀಡಿದಷ್ಟು ಅಣ್ಣಿಗೇರಿಯಲ್ಲಿ ತೇಗ್ಗು ಬಿದ್ದಿರುವ ರಸ್ತೆಗಳನ್ನು ನೋಡುತ್ತಿಲ್ಲ. ಅವರು ಸಾರ್ವಜನಿಕವಾಗಿ ಮಾತಾಡಿದರೆ ಏನು ಕೇಲಸ ಮಾಡುವ ಕಾರ್ಯ ಆಗಬೇಕು.ಅಲ್ಲಿ ಪ್ರತಿನಿತ್ಯ ಸಾರ್ವಜನಿಕರಿಗೆ ತೋಂದರೆ ಆಗುತ್ತಿದೆ. ತಕ್ಷಣವೆ ಕಾಮಗಾರಿಯನ್ನು ಪ್ರಾರಂಭಿಸಬೇಕು.
- ಭರತೇಶ ಜೈನ್, ಸಾಮಾಜಿಕ ಹೊರಾಟಗಾರ..
ಈ ಸಂದರ್ಭದಲ್ಲಿ ಯುವಕರಾದ ಸಂಜು ನಾಗನಕೇರೆ, ಮಹಾಂತೇಶ ನಾವಳ್ಲಿ, ಉಮೇಶ ಬಿಳೇಯಲಿ, ದತ್ತು ಇಸರಣ್ಣವರ.ಅಮೃತ ಮರಡ್ಡಿ, ಉಮೇಶ ದಳವಾಯಿ ಹಾಗೂ ಹಲವಾರು ಯುವಕರು ಇದ್ದರು.