ಪ್ರೆಶರ್ ಕುಕ್ಕರ್ ಸ್ಫೋಟಿಸಿ 28 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಕೃತ್ಯ ಎಂದು ತಿಳಿದರೂ ತನಿಖೆಯ ಬಳಿಕ ಘಟನೆ ಆಕಸ್ಮಿಕ ಎಂದು ಪೋಲಿಸರು ತಿಳಿಸಿದ್ದಾರೆ.
ಮೃತ ಮೋಶಿನ್ ಮತ್ತು ಗಾಯಗೊಂಡ ಆತನ
ರೂಮ್‌ಮೇಟ್ ಸಮೀರ್ ಇಬ್ಬರು ಉತ್ತರ ಪ್ರದೇಶದವರಾಗಿದ್ದು, ಬೆಂಗಳೂರಿನ ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ಈ ಘಟನೆಯು ಸಂಭವಿಸಿದೆ.
ಈ ಘಟನೆಯು ಭದ್ರತಾ ಸಿಬ್ಬಂದಿಗಳ ಗಮನಕ್ಕೂ ಬಂದ ಮೇಲೆ ಎನ್‌ಐಎ, ಆಂತರಿಕ ಭದ್ರತಾ ವಿಭಾಗ ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೊಠಡಿಯಲ್ಲಿ ಸ್ಫೋಟಕ ವಸ್ತುಗಳ ಕುರುಹುಗಳನ್ನು ಹಾಗೂ ಆವರಣವನ್ನು ಪರಿಶೀಲಿಸಿದರು. ಯಾವುದೇ ಸ್ಫೋಟಕದ ಕುರುಹು ದೊರೆತಿಲ್ಲ.
” ಮುಖ್ಯವಾಗಿ ಇದು ಕುಕ್ಕರ್ ಸ್ಫೋಟದ ಘಟನೆ ಎಂದು ತಿಳಿದು ಬಂದಿದೆ.” ಘಟನೆಗೂ ಭಯೋತ್ಪಾದನಾ ಚಟುವಟಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿದ್ದಾರೆ.