ನೆಲಮಂಗಲ: 2 ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ನಾಯಿಯನ್ನು ಹುಡುಕಲು ಹೋಗಿದ್ದ ಬಾಲಕನೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಯೋಗೇಂದ್ರ ಎಂಬ14 ವರ್ಷದ ಬಾಲಕ ಸಾವನ್ನಪ್ಪಿದ್ದು, ನೆಲಮಂಗಲ ಗ್ರಾಮಾಂತರ ಪ್ರದೇಶದಲ್ಲಿ ರೈಲ್ವೆ ಟ್ರಾಕ್ ದಾಟುವಾಗ ದುರ್ಘಟನೆ ನಡೆದಿದೆ. ಈತ ತನ್ನ ಕಾಣೆಯಾಗಿದ್ದ ನಾಯಿಯನ್ನು ಹುಡುಕಲು ಪೋಷಕರಿಗೆ ತಿಳಿಸದೆ ತೆರಳಿದ್ದ ಎನ್ನಲಾಗಿದೆ.
ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಯೋಗೇಂದ್ರನ ಶವವನ್ನು ಪೊಲೀಸರು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

