ರಾಜಕೀಯ ಸುದ್ದಿ

ಪ್ರಧಾನಿ ಮೋದಿ ರೋಡ್ ಶೋನಿಂದ 50 ಮೀಟರ್ ದೂರದಲ್ಲಿ ಅಗ್ನಿ ಅವಘಡ

Share It

ಮಂಗಳೂರು, ಏಪ್ರಿಲ್​ 14: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್​ಶೋ ಪಕ್ಕದಲ್ಲೇ ಅಗ್ನಿ ಅವಘಡ ಸಂಭವಿಸಿದೆ.
ಮಂಗಳೂರಿನ ಲಾಲ್​ಬಾಗ್​ ಸರ್ಕಲ್‌ನ, ಕೆಎಸ್​ಆರ್​ಟಿಸಿ ಬಸ್ ಸ್ಟಾಂಡ್ ಮುಂಭಾಗದಲ್ಲಿರುವ ಭಾರತ್ ಮಾಲ್ ಬಳಿಯ ಮೆಡಿಕಲ್ ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ. ಪ್ರಧಾನಿ ಮೋದಿ ರೋಡ್ ಶೋನಿಂದ ಕೇವಲ 50 ಮೀಟರ್ ಅಂತರದಲ್ಲಿ ಅವಘಡ ಸಂಭವಿಸಿದ್ದು, ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿಯನ್ನು ನಂದಿಸಲಾಗಿದೆ.


Share It

You cannot copy content of this page