ಕುಣಿಗಲ್: ಗಂಡನೇ ತನ್ನ ಹೆಂಡತಿಯ ರುಂಡ-ಮುಂಡುವನ್ನು ಬೇರ್ಪಡಿಸಿ, ಆಕೆಯ ಚರ್ಮವನ್ನು ಸುಲಿದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ಪಟ್ಟಣದ ಹೊಸಕೋಟೆಯಲ್ಲಿ ನಡೆದಿದೆ.
ಸಾಮಿಲ್‌ವೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಶಿವರಾಮ್ ಎಂಬಾತ, ಕಳೆದ ನಾಲ್ಕೆöÊದು ವರ್ಷದ ಹಿಂದೆ ಪುಷ್ಪಾ ಎಂಬಾಕೆಯನ್ನು ಮದುವೆಯಾಗಿದ್ದ. ಮನೆಯಲ್ಲಿ ಆಗಾಗ ಇಬ್ಬರ ನಡುವೆ ಕಲಹವಾಗುತ್ತಿತ್ತು. ಸಣ್ಣಪುಟ್ಟ ವಿಚಾರಕ್ಕೆ ಗಂಡ-ಹೆಂಡತಿ ಜಗಳ ಮಾಡಿಕೊಳ್ಳುತ್ತಿದ್ದರು.
ಸೋಮವಾರ ಜಗಳ ವಿಕೋಪಕ್ಕೆ ತಿರುಗಿ, ಆಕೆಯನ್ನು ಮಾರಕಾಸ್ತçಗಳಿಂದ ಹೊಡೆದು ಕೊಲೆ ಮಾಡಿರುವ ಆರೋಪಿ, ಶಿವರಾಮು, ಆಕೆಯ ರುಂಡ ಮತ್ತು ಮುಂಡವನ್ನು ಕತ್ತರಿಸಿದ್ದಾನೆ. ನಂತರ ಚರ್ಮ ಸುಲಿದು, ಚೀಲದಲ್ಲಿ ತುಂಬಿಟ್ಟಿದ್ದಾನೆ.
ಹುಲಿಯೂರು ದುರ್ಗ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
