ಅಪರಾಧ ಸುದ್ದಿ

ವ್ಯಾಜ್ಯ ಬಗೆಹರಿಸುವುದಷ್ಟೇ ನ್ಯಾಯವಾದಿಗಳ ಕಾರ್ಯವಲ್ಲ. ಕಾನೂನು ತಿಳುವಳಿಕೆ ನೀಡುವುದು ನಮ್ಮ ಕರ್ತವ್ಯ

Share It

ಕೊಪ್ಪಳ: ವ್ಯಾಜ್ಯಗಳನ್ನು ಬಗೆಹರಿಸುವುದಷ್ಟೇ ನ್ಯಾಯವಾದಿಗಳ ಕಾರ್ಯವಲ್ಲ. ಬದಲಾಗಿ ಕಾನೂನು ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಆಳವಾದ ಅಧ್ಯಯನದಲ್ಲಿ ತೊಡಗಿ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ನಿರ್ದೆಶಕ ಆಸೀಫ್ ಅಲಿ ಕರೆ ನೀಡಿದರು.

ನಗರದ ಗದಗ ರಸ್ತೆಯ ಗುಳಗಣ್ಣನವರ ಕಾಲೇಜಿನಲ್ಲಿ ಶ್ರೀ ಶಿವಪ್ರಿಯಾ ಕಾನೂನು ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ವಕೀಲರು ಕೇವಲ ವ್ಯಾಜ್ಯಗಳನ್ನು ಬಗೆಹರಿಸುವುದಷ್ಟೇ ನಮ್ಮ ಕೆಲಸವೆಂದು ಭಾವಿಸುವರು, ಅವುಗಳನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ತಿಳುವಳಿಕೆ ನೀಡಬೇಕಿದೆ. ದಶಕಗಳ ಹಿಂದೆ ಕಾನೂನು ಪದವಿ ಅಧ್ಯಯನ ಮಾಡುವವರು ಪರಿಣತಿ ಸಾಧಿಸಿ ಕೇಸು ಗೆಲ್ಲುವ ಉದ್ದೆಶ ಹೊಂದಿರುತ್ತಿದ್ದರು. ಆದರೆ, ಕಾನೂನು ವಿದ್ಯಾರ್ಥಿಗಳು ಕಾನೂನು ಪದವಿ ಗಳಿಸಿ ಉನ್ನತ ಸ್ಥಾನಕ್ಕೆ ಹೋಗುವ ಆಕಾಂಕ್ಷೆ ಹೊಂದಿರಬೇಕು. ಕಕ್ಷಿದಾರರ ಪ್ರತಿನಿಧಿಸುವಿಕೆ, ಸಲಹೆ ನೀಡುವಿಕೆ ಸೇರಿ ನ್ಯಾಯವಾದಿಗಳ ಕಾರ್ಯವ್ಯಾಪ್ತಿ ವಿಸ್ತಾರಗೊಂಡಿದೆ. ಈ ದಿಸೆಯಲ್ಲಿ ಕಾನೂನು ವಿದ್ಯಾರ್ಥಿಗಳು ಪ್ರತಿಭಾ ಸಂಪನ್ನರಾಗಿ ಕಾನೂನು ವಿದ್ಯಾಭ್ಯಾಸ ನಡೆಸಬೇಕು ಎಂದರು.

ವಕೀಲ ವೃತ್ತಿ ಎಂದಿಗೂ ಎವರ್ ಗ್ರೀನ್. ಬರುವ ಐದು ವರ್ಷಗಳಲ್ಲಿ ಭಾರತೀಯ ಕಾನೂನು ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚಲಿದೆ. ಔದ್ಧಿಕ ಹಕ್ಕು ಕಾಯ್ದೆ ಬಂದ ನಂತರವAತೂ ವಕೀಲರ ಮಹತ್ವ ಇನಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕಳೆದ ಕೆಲವು ದಶಕಗಳಿಂದ ಭಾರತೀಯ ಬಾರ್‌ ಕೌನ್ಸಿಲ್ ಆಲೋಚಿಸಿ ವೃತ್ತಿಗೂ ಪ್ರವೃತ್ತಿಗೂ ಸರಿತೂಗುವಂತಹ ವಿಶಿಷ್ಟವಾದ ಕೆಲವು ಕೋರ್ಸುಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು.

ಜಿಲ್ಲಾ ನ್ಯಾಯವಾದಿಗಳ ಸಂಘ ಅಧ್ಯಕ್ಷ ಎ.ವಿ.ಕಣವಿ ಮಾತನಾಡಿ, ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ವಕೀಲರು ನೋಂದಣಿ ಮಾಡಿಸಿಕೊಳ್ಳುತ್ತಿದ್ದರೂ, ಇದೆಲ್ಲಾ ಭೌತಿಕ ಬೆಳವಣಿಗೆಯಾಗಿದೆಯೇ ಹೊರತು ಕಾನೂನಿನ ಕುರಿತು ಆಳವಾದ ಅಧ್ಯಯನ ನಡೆಯುತ್ತಿಲ್ಲ. ದೇಶದಲ್ಲಿ 1958 ರಲ್ಲಿ ಕೇವಲ 43 ಕಾನೂನು ಕಾಲೇಜಿದ್ದು, ಅವುಗಳ ಸಂಖ್ಯೆ ಈಗ 1100 ಕ್ಕೆ ಹೆಚ್ಚಿದ್ದರೂ ನಿರೀಕ್ಷೆಯಂತೆ ಕಾನೂನಿನ ಬಗ್ಗೆ ಆಳವಾದ ಅಧ್ಯಯನ ನಡೆಯಬೇಕಿದೆ.

ಒಂದು ಕಾಲದಲ್ಲಿ ನ್ಯಾಯವಾದಿಗಳ ಬಳಿಗೆ ಕಕ್ಷಿದಾರರು ಬರುವಾಗ ತಮ್ಮ ಚಪ್ಪಲಿಗಳನ್ನು ಹೊರಗೆ ತೆಗೆದಿಟ್ಟು ಬರುತ್ತಿದ್ದರು. ಈ ರೀತಿಯ ಗೌರವವನ್ನು ನ್ಯಾಯವಾದಿಗಳಿಗೆ ನೀಡಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ನ್ಯಾಯವಾದಿಗಳು ಹಣಕ್ಕಾಗಿ ಕಾರ್ಯ ನಿರ್ವಹಿಸದೆ ಮೌಲ್ಯಗಳಿಗೆ ಗೌರವ ಕೊಟ್ಟು ಕಾರ್ಯ ನಿರ್ವಹಿಸಬೇಕಾಗಿದೆ. ಸಮಾಜ ಸುಧಾರಣೆಯಲ್ಲಿ ನ್ಯಾಯವಾದಿಗಳ ಪಾತ್ರ ಅತಿ ಪ್ರಾಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನ್ಯಾಯವಾದಿಗಳು ಗಮನ ಹರಿಸಬೇಕು ಎಂದರು.

ಕಕ್ಷಿದಾರರು ಮತ್ತು ನ್ಯಾಯವಾದಿಗಳ ನಡುವೆ ಉತ್ತಮ ಸಂಬAಧ ಇರಬೇಕು. ನ್ಯಾಯವಾದಿಗಳ ಜ್ಞಾನಕ್ಕೆ ಯಾವುದೇ ಪರಿಮಿತಿ ಇಲ್ಲ. ಆತ ರಾಷ್ಟ್ರದ ಸಂಪೂರ್ಣ ಜ್ಞಾನ ಹೊಂದಿರಬೇಕು. ತತ್ವಜ್ಞಾನಿಯಂತೆ ಚಿಂತನೆ ನಡೆಸಬೇಕು. ಇಂದಿನ ಸಮಾಜದಲ್ಲಿ ಮೌಲ್ಯಗಳ ಕುಸಿತದಿಂದ ಪ್ರಕರಣಗಳೂ ಹೆಚ್ಚಿ ತೀರ್ಪುಗಳು ಇತ್ಯರ್ಥವಾಗಲು ವಿಳಂಬವಾಗುತ್ತಿವೆ. ಕೇಸುಗಳು ತ್ವರಿತ ಗತಿಯಲ್ಲಿ ವಿಲೇವಾರಿಯಾಗುವ ನಿಟ್ಟಿನಲ್ಲಿ ನ್ಯಾಯವಾದಿಗಳು ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು.

ಕಾಲೇಜು ಉಪಾಧ್ಯಕ್ಷ ರಾಘವೇಂದ್ರ ಪಾನಗಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ವಿದ್ಯಾಭ್ಯಾಸವು ಇಂದು ಕೇವಲ ವಕೀಲರು ಹಾಗೂ ನ್ಯಾಯಾಧೀಶರನ್ನು ಸೃಷ್ಟಿ ಮಾಡುವ ಏಕೈಕ ಉದ್ದೇಶ ಹೊಂದಿಲ್ಲ. ಯಾವುದೇ ಕ್ಷೇತ್ರ, ಸೇವೆ, ವೃತ್ತಿಯಾಗಿರಲಿ ಕಾನೂನು ಅರಿವು ಅಳವಡಿಕೆ ಅತ್ಯಂತ ಅಗತ್ಯ. ಕಾನೂನು ಅಧ್ಯಯನ ಸಾಕಷ್ಟು ಉದ್ಯೋಗವಕಾಶಗಳನ್ನು ಕಲ್ಪಿಸುತ್ತಿದೆ. ಅಂತರ್ಜಾಲ ನಮ್ಮ ಮನೆ, ಮನವನ್ನು ಹೊಕ್ಕಿರುವ ಈ ದಿನಗಳಲ್ಲಿ ಸೈಬರ್ ಅಪರಾಧ ಕೂಡ ದಿನೇ ದಿನೇ ಹೆಚ್ಚುತ್ತಿದೆ. ಹಾಗಾಗಿ ತಾಂತ್ರಿಕ ಪರಿಣತಿ ಹೊಂದಿರುವ ಕಾನೂನು ವಿದ್ಯಾರ್ಥಿಗಳು ಸೈಬರ್ ಕಾನೂನು ಅಧ್ಯಯನ ಮಾಡಿದಲ್ಲಿ ವಿಫುಲ ಅವಕಾಶಗಳಿವೆ ಎಂದು ಕಿವಿಮಾತು ಹೇಳಿದರು.

ಹುಣಸಿಹಾಳದ ಶ್ರೀ ರುದ್ರಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಪೀರ್ ಹುಸೇನ್, ಪ್ರಾಚಾರ್ಯ ಬಸವರಾಜ ಹನಸಿ, ಎಂ.ಎ. ವಾಲಿಸಾಬ್, ಎಸ್.ಜಿ. ಪಾಟೀಲ, ರಜಿತಾಬೇಗಂ, ಸೈಫ್ ಅಲಿ, ಸೋಮಶೇಖರ ರಾಜು ಯು, ಮಹಾಲಕ್ಷಿö್ಮ ಪಾನಗಂಟಿ, ಅಶ್ವಿನ್ ಜಾಂಗಡಾ ಸೇರಿದಂತೆ ಇತರರು ಇದ್ದರು.


Share It

You cannot copy content of this page