ಬೆಂಗಳೂರು: ಹೋಟೆಲ್ ನಲ್ಲಿ ಕುಳಿತು ಒಂದು ಕಾಫಿ ಆರ್ಡರ್ ಮಾಡಿ ಗಂಟೆಗಟ್ಟಲೇ ಕುಳಿತು ಹರಟೆ ಹೊಡೆಯುವವರಿಗೆ ಬರೆ ಹಾಕಲು ಹೋಟೆಲ್ ಮಾಲೀಕರ ಸಂಘ ತೀರ್ಮಾನಿಸಿದೆ.
ಇನ್ಮುಂದೆ ಹೋಟೆಲ್ ನಲ್ಲಿ ಕುಳಿತು ಸುಮ್ಮನೆ ಹರಟೆ ಹೊಡೆಯುವವರಿಗೆ ಟೇಬಲ್ ಚಾರ್ಜ್ ಹಾಕಲು ಸಿದ್ಧತೆ ನಡೆಸಿದೆ. ಈ ಕುರಿತು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಚರ್ಚೆ ನಡೆಸಿದ್ದು, ಶೀಘ್ರವೇ ಈ ನಿಯಮ ಜಾರಿಗೊಳಿಸಲು ತೀರ್ಮಾನಿಸಿದೆ.
ಹೋಟೆಲ್ನಲ್ಲಿ ಸುಮ್ಮನೆ ಕುಳಿತು ಹರಟೆ ಹೊಡೆಯುವವರ ಸಂಖ್ಯೆ ಹೆಚ್ಚಿದೆ. ತಿಂಡಿ ಅಥವಾ ಊಟ ಮಾಡುವ ಜನರಿಗೆ ಕೆಲವೊಮ್ಮೆ ಟೇಬಲ್ ಸಿಗುವುದಿಲ್ಲ. ಈ ಕಾರಣಕ್ಕೆ ಕೆಲವೊಮ್ಮೆ ಹೋಟೆಲ್ಗೆ ವ್ಯಾಪಾರ ಕುಂಠಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹದ್ದೊಂದು ಚಿಂತನೆಯ ಅಗತ್ಯವಿದೆ ಎಂದು ಹೇಳಲಾಗಿದೆ.

