ಲಕ್ನೋ: ತಡವಾಗಿ ಅಡುಗೆ ಮಾಡಿದ್ದಕ್ಕೆ ಹೆಂಡತಿಯನ್ನೇ ಕಬಬಿಣದ ರಾಡುವಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾರಬಂಕಿ ಪ್ರದೇಶದ ಮಾಲ್‌ಪುರ ಗ್ರಾಮದಲ್ಲಿ ನಡೆದಿದೆ.
ಅಮರೀಶ್ ಎಂಬ ವ್ಯಕ್ತಿ ತನ್ನ 25 ವರ್ಷದ ಪತ್ನಿ ಸುಮನ್ ಎಂಬಾಕೆಯನ್ನು ಅಡುಗೆ ಮಾಡಲು ತಡ ಮಾಡಿದಳು ಎಂಬ ಕಾರಣಕ್ಕೆ ಕಬ್ಬಿಣದ ರಾಡ3ವಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿ ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಯನ್ನು ಹಿಡಿಯಲು ಬಲೆ ಬೀಸಿದ್ದಾರೆ.
ಮಡದಿ ಸುಮನ್‌ಗಳನ್ನು ಅಮರೀಶ್ ಕಬ್ಬಿಣದ ರಾಡಿನಿಂದ ತಲೆಗೆ ನಾಲ್ಕೈದು ಬಾರಿ ಬಲವಾಗಿ ಭಾರಿಸಿದ್ದಾನೆ. ಆಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ಯಾವುದೇ ವೈದ್ಯಕೀಯ ನೆರವು ಸಿಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.