ಜಲಮಂಡಳಿ ಗುಂಡಿಗೆ ಯುವಕ ಬಲಿ
ಬೆಂಗಳೂರು : ಬೆಂಗಳೂರಿನ ಗುಂಡಿ ಕಾಟಕ್ಕೆ ಮತ್ತೊಂದು ಬಲಿಯಾಗಿದೆ. ಆದರೆ, ಈ ಬಾರಿಯ ರಸ್ತೆಯಲ್ಲಿ ತೋಡಿದ್ದ ಜಲಮಂಡಳಿಯ ಪೈಪ್ಲೈನ್ ಗುಂಡಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಕೆಂಗೇರಿ ಸಮೀಪದ ಕೊಮ್ಮಘಟ್ಟ ಸರ್ಕಲ್ನಲ್ಲಿ ನಡೆದಿದೆ.
ಬೈಕಿನಲ್ಲಿ ಬರುತ್ತಿದ್ದ ಮೂವರು ಯುವಕರು ಪೈಪ್ ಲೈನ್ಗಾಗಿ ತೋಡಿದ್ದ ಗುಂಡಿಗೆ ಬೈಕ್ ಸಮೇತ ಬಿದ್ದಿದ್ದಾರೆ. ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಯುವಕರನ್ನ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೆಂಗೇರಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದು, ಮೃತನ ವಿವರ ಲಭ್ಯವಾಗಬೇಕಿದೆ.
ಗುಂಡಿ ಪಕ್ಕ ಯಾವುದೇ ಬ್ಯಾರಿಕೇಡ್ ಅಳವಡಿಸದಿರುವುದು ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ ಇದೇ ಪೈಪ್ಲೈನ್ ಅಳವಡಿಕೆ ಕಾಮಗಾರಿ ಸಂದರ್ಭದಲ್ಲಿ ಉಲ್ಲಾಳ ಕೆರೆ ಬಳಿ ಕಾಮರ್ಿಕನೊಬ್ಬ ಮೃತಪಟ್ಟಿದ್ದ