ಸುದ್ದಿ

ಡೈವೋರ್ಸ್ ಸಿಕ್ಕಿದ್ದ 9 ಕಿ.ಮೀ. ದೂರ ದಂಡಯಾತ್ರೆ ಮಾಡಿ ದೇವಿಯ ಹರಕೆ ತೀರಿಸಿದ ಯುವಕ

Share It

ಲಕ್ನೋ: ತನಗೆ ವಿವಾಹ ವಿಚ್ಛೇಧನ ಸಿಕ್ಕಿದ ಖುಷಿಯನ್ನು ಯುವಕನೊಬ್ಬ ಸುಮಾರು 9 ಕಿ.ಮೀ. ದಂಡಯಾತ್ರೆ ಹಾಕುವ ಮೂಲಕ ದೇವಿಯ ಹರಕೆ ತೀರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ರಾಮನಗರದ ಸೋನ್ಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 25 ವರ್ಷದ ಯುವಕನೊಬ್ಬ ಸ್ಥಳೀಯ ದೇವಿಗೆ ತಾನು ಹೊತ್ತ ಹರಕೆಯಂತೆ ದಂಡಾವತ್ ಯಾತ್ರೆಯ ಮೂಲಕ 9 ಕಿ.ಮೀ ದೂರವನ್ನು ಕ್ರಮಿಸಿದ್ದಾನೆ.

ನರ್ಖೋರಿಯಾ ಗ್ರಾಮದ ಜೋಗೇಶ್ ತನ್ನ ಕೋರಿಕೆಯಂತೆ ಡಿವೋರ್ಸ್ ಆದ ಕಾರಣಕ್ಕೆ ದಿನವಿಡೀ ಉಪವಾಸ ಮಾಡಿ, ಬೈದಾ ಮಾತಾ ದೇವಸ್ಥಾನಕ್ಕೆ ಹರಕೆ ತೀರಿಸಿದ್ದಾನೆ. ಆತ 9 ಕಿ.ಮೀ ದೂರವನ್ನು ಕ್ರಮಿಸಿದ್ದು, ಇದಕ್ಕಾಗಿ ಆತ 12 ಗಂಟೆ ಸಮಯ ತೆಗೆದುಕೊಂಡಿದ್ದಾನೆ.

2022ರಲ್ಲಿ ವಿವಾಹವಾಗಿದ್ದ ಜೋಗೇಶ್ ಕೌಟುಂಬಿಕ ಕಾರಣಗಳಿಂದ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಇದೀಗ ನ್ಯಾಯಾಲಯ ಡಿವೋರ್ಸ್ ನೀಡಿದ ಬೆನ್ನಲ್ಲೇ ಹರಕೆ ತೀರಿಸಿದ್ದಾನೆ. ಆತ ಜೈ ಶ್ರೀರಾಮ್ ಎನ್ನುತ್ತಾ ದಂಡಯಾತ್ರೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Share It

You cannot copy content of this page