ಶಿವಮೊಗ್ಗ: ಐಎಸ್‌ಐ ಕನಸು ಕಂಡಿದ್ದ ಯುವತಿಯೊಬ್ಬಳ ಕನಸ್ಸು ಶುಕ್ರವಾರ ನಸುಕಿನ ಜಾವ ಬ್ಯಾಡಗಿ ಬಳಿ ನಡೆದ ಅಪಘಾತದಲ್ಲಿ ಕಮರಿಹೋಗಿದೆ.
ತಾನು ಐಎಎಸ್ ಆಗಬೇಕೆಂಬ ಹೆಬ್ಬಯಕೆ ಹೊಂದಿದ್ದ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿಯ ಮಾನಸ ಎಂಬಾಕೆ ಸಾವನ್ನಪ್ಪಿದ್ದು, ಜತೆಯಲ್ಲಿ ಆಕೆಯ ತಾಯಿ ಭಾಗ್ಯಮ್ಮ ಸಹ ಸಾವನ್ನಪ್ಪಿರುವುದು ದುರಂತವಾಗಿದೆ.
೨೫ ವರ್ಷದ ಮಾನಸ ಅಂಧರ ರಾಜ್ಯ ಪುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ಭಾರತ ತಂಡಕ್ಕೆ ಆಯ್ಕೆ ಕೂಡ ಆಗಿದ್ದರು ಎನ್ನಲಾಗಿದೆ. ಜತೆಗೆ, ಆಕೆಗೆ ಐಎಎಸ್ ಮಾಡಬೇಕೆಂಬ ಕನಸಿತ್ತು. ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬ ಹೆಬ್ಬಯಕೆ ಇತ್ತು ಎನ್ನಲಾಗಿದೆ.
ಮಾನಸ ಸೇರಿದಂತೆ ಎಮ್ಮೆಹಟ್ಟಿ ಗ್ರಾಮದ ೧೩ ಜನರು ಮೃತಪಟ್ಟಿರುವುದು ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ತಮ್ಮ ಮೊಮ್ಮಗಳ ಸಾಧನೆಯನ್ನು ನೆನೆದು ಆಕೆಯ ಅಜ್ಜಿ ರತ್ನಾಬಾಯಿ ಕಣ್ಣೀರಿಟ್ಟಿದ್ದಾರೆ.