ಬೆಂಗಳೂರು: ಶಿಡ್ಲಘಟ್ಟದ ಪುರಸಭೆ ಅಧಿಕಾರಿಗೆ ನಿಂಧಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ರಾಜೀವ್ ಗೌಡ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಶಿಸ್ತುಸಮಿತಿ ಶಿಫಾರಸು ಮಾಡಿದೆ.
ಪ್ರಕರಣದಲ್ಲಿ ಅವರನ್ನು ಬಂಧಿಸದೆ ಪೊಲೀಸರು ಮೀನಾಮೇಷ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪೋಸ್ಟರ್ ಅಭಿಯಾನ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ, ಅವರ ಉಚ್ಛಾಟನೆಗೆ ಶಿಫಾರಸು ಮಾಡಿದೆ.
ಜಿ.ಸಿ.ಚಂದ್ರಶೇಖರ್ ನೊಟೀಸ್ ನೀಡಿ, ಪ್ರಕರಣದ ಸಂಬAಧ ಸಮಜಾಯಿಷಿ ನೀಡುವಂತೆ ಸೂಚಿಸಿದ್ದರು. ಆದರೆ, ತಲೆ ಮರೆಸಿಕೊಂಡಿರುವ ರಾಜೀವ್ ಗೌಡ, ಈವರೆಗೆ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ, ಉಚ್ಛಾಟನೆಗೆ ಶಿಫಾರಸು ಮಾಡಲಾಗಿದೆ.

