ಹಾಸನ: ಪ್ರಜ್ವಲ್ ರೇವಣ್ಣ ಸೋಲಿನ ನಂತರ, ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಪೆನ್ ಡ್ರೈವ್ ಪ್ರಕರಣದಲ್ಲಿ ಹಾಸನದ ಮಾಜಿ ಸಚಿವ ಪ್ರಜ್ವಲ್ ರೇವಣ್ಣ ಎಸ್‌ಐಟಿ ಬಂಧನದಲ್ಲಿದ್ದಾರೆ. ಈ ನಡುವೆ ಎಫ್‌ಐಆರ್ ದಾಖಲಾಗಿರುವ, ಎಸ್‌ಐಟಿ ಬಂಧನಕ್ಕೆ ಸಿದ್ಧತೆ ನಡೆಸಿರುವ ಪೆನ್ ಡ್ರೈವ್ ಹಂಚಿಕೆ ಆರೋಪಿಗಳಾದ ಕಾರ್ತಿಕ್ ಗೌಡ ಮತ್ತು ಪುಟ್ಟಸ್ವಾಮಿ ಅವರು ಸಂಭ್ರಮಾಚರಣೆ ನಡೆಸಿದ್ದಾರೆ.
ಎಸ್‌ಐಟಿ ಪೊಲೀಸರ ಕೈಗೆ ಸಿಗದಂತೆ ಈವರೆಗೆ ಆಟ ಆಡಿಸಿದ್ದ ಈ ಇಬ್ಬರು ಆರೋಪಿಗಳು ಹೊಳೇನರಸೀಪುರದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ. ಎಚ್.ಡಿ.ರೇವಣ್ಣ ಅವರ ನಿವಾಸದ ಮುಂದೆ ಪಟಾಕಿ ಹೊಡೆದು, ಸಂಭ್ರಮಿಸಿದ್ದಾರೆ ಎಂದು ಹೇಳಲಾಗಿದೆ.
ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರೂ, ಪೊಲೀಸರು ಅವರನ್ನು ಬಂಧನ ಮಾಡಿಲ್ಲವಾ? ಅಥವಾ ಕಾಂಗ್ರೆಸ್ ಗೆಲುವಿನ ನಂತರ ಅವರು ಎಸ್‌ಐಟಿ ಮುಂದೆ ಶರಣಾಗಲು ತೀರ್ಮಾನಿಸಿದ್ದಾರಾ? ಪೊಲೀಸರು ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಾರಾ ಎಂಬೆಲ್ಲ ಕುತೂಹಲಗಳು ಈಗ ಗರಿಗೆದರಿದೆ.

