ನವಲಗುಂದ : ಮಹಾದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಯ ನೋಟಿಪೀಕೇಷನ್ ಹೊರಡಿಸಿದರು ಸಹ ಅರಣ್ಯ ಇಲಾಖೆ ಹಾಗೂ ವನ್ಯ ಜೀವಿ ಅನುಮತಿ ಆದೇಶವನ್ನು ನೀಡಿ ಈ ಯೋಜನೆ ಅನುಷ್ಠಾನಗೊಳಿಸಬೇಕು. ಹಾಗೂ ಮಹಾದಾಯಿ ಹೋರಾಟದಲ್ಲಿ ರೈತರ ಮೇಲಿರುವ ಕೇಸುಗಳನ್ನು ತೆಗದುಹಾಕಬೇಕೆಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಕೈಗಾರಿಕಾ ಮಂತ್ರಿಯಾದ ಎಚ್.ಡಿ.ಕುಮಾಸ್ವಾಮಿ ಅವರಿಗೆ ಕನಾ೯ಟಕ ರಾಜ್ಯ ಜಾತ್ಯಾತೀತ ಪಕ್ಷಾತೀತ ರೈತ ಅಸಂಘಟಿತ ಕಾಮಿ೯ಕರ ಒಕ್ಕೂಟ ಕೇಂದ್ರ ಸಮಿತಿಯ ವರಿಷ್ಠರಾದ ಲೋಕನಾಥ ಹೆಬಸೂರ ಅವರು ಧಾರವಾಡದಲ್ಲಿ ರೈತರ ಜೊತೆಗೂಡಿ ಮನವಿ ನೀಡಿ ಒತ್ತಾಯಿಸಿದರು.
ಸುಮಾರು ವಷ೯ಗಳಿಂದ ರೈತರು ಮಹಾದಾಯಿಗಾಗಿ ಹೋರಾಟ ಮಾಡುತ್ತಾ ಬಂದಿರುತ್ತಾರೆ. ಹೋರಾಟದ ಸಮಯದಲ್ಲಿ ರೈತರ ಮೇಲೆ ಪ್ರಕರಣಗಳನ್ನು ದಾಖಲಿಸಿ ಇವತ್ತಿಗೂ ನೋಟಿಸ್ ಬರುತ್ತೇವೆ. ಕಾರಣ ರೈತರ ಮೇಲಿರುವ ಪ್ರಕರಣಗಳನ್ನು ಇತ್ಯಥ೯ ಮಾಡಿ ಖುಲಾಸಿ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
2022-23 ನೇ ಸಾಲಿನಲ್ಲಿ ಬೆಳೆವಿಮೆ ತುಂಬಿದ್ದು ಅಧಿಕಾರಿಗಳು ಮಾಡಿದ ತಪ್ಪಿನಿಂದ ಬೆಳೆವಿಮೆ ಕ್ಲೈಮ್ ಆದರೂ ಕೂಡಾ ರೈತರು ಬೆಳೆ ವಿಮೆಯಿಂದ ವಂಚಿರಾಗಿದ್ದಾರೆ. ಇನ್ನು ಬ್ಯಾಂಕಿನವರು ರೈತರಿಗೆ ಸರಳವಾಗಿ ಸಾಲ ನೀಡಲು ಹಿಂದೇಟು ಹಾಕುತ್ತಾರೆ. ಇವರಿಗೆ ಸರಿಯಾದ ನಿದೇಶ೯ನ ನೀಡಿ ರೈತರಿಗೆ ಅನುಕೂಲ ಮಾಡಬೇಕೆಂದು ಹೇಳಿದರು.
ಈ ಸಂದಭ೯ದಲ್ಲಿ ರೈತ ಒಕ್ಕೂಟದ ಅಧ್ಯಕ್ಷ ರಘುನಾಥ ನಡುವಿನಮನಿ, ರಮೇಶ ಹಲಗತ್ತಿ, ಫಕ್ಕೀರಗೌಡ ವೆಂಕನಗೌಡ್ರ, ಗೌಡಪ್ಪಗೌಡ ದೊಡಮನಿ, ವಿಠ್ಠಲ ಒಕ್ಕುಂದ, ಮಲ್ಲಿಕಾಜು೯ನಗೌಡ ಪಾಟೀಲ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.