ಅಪರಾಧ ಸುದ್ದಿ

ನಟ ದರ್ಶನ್ ಮತ್ತು ಗ್ಯಾಂಗ್ ಗೆ ಜುಲೈ 18 ರವರೆಗೆ ಜೈಲೇ ಗತಿ: ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ ನ್ಯಾಯಾಲಯ

Share It

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಸೇರಿ ಉಳಿದೆಲ್ಲ ಆರೋಪಿಗಳಿಗೆ ಜು.18 ರವರೆಗೆ ಜೈಲೇ ಗತಿ ಎನ್ನವಂತಾಗಿದೆ.

ನಟ ದರ್ಶನ್ ಮತ್ತು ಇತರೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಗೆ ಇಂದು(ಜು.4) ಕ್ಕೆ ಮುಗಿದಿತ್ತು. ಈ ಕಾರಣದಿಂದ ದರ್ಶನ್ ಮತ್ತು ಗ್ಯಾಂಗ್ ಅನ್ನು ಪೊಲೀಸರು 42 ನೇ ಎಸಿಎಂಎಂ ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ್ದರು.

ಈ ವೇಳೆ ವಿಡಿಯೋ ಕಾನ್ಪರೆನ್ಸ್ ಮೂಲಕವೇ ವಿಚಾರಣೆ ನಡೆಸಿದ ನ್ಯಾಯಾಲಯ, ನ್ಯಾಯಾಂಗ ಬಂಧನದ ಅವಧಿಯನ್ನು ಜು.18 ರವರೆಗೆ ವಿಸ್ತರಣೆಗೊಳಿಸಿ ಆದೇಶ ಹೊರಡಿಸಿತು. ನ್ಯಾಯಾಲಯದ ಈ ತೀರ್ಮಾನ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ಜಾಮೀನು ನಿರೀಕ್ಷೆಯಲ್ಲಿದ್ದವರು ನಿರಾಶರಾಗಿದ್ದಾರೆ.

.


Share It

You cannot copy content of this page