ಅಪರಾಧ ಸಿನಿಮಾ ಸುದ್ದಿ

ಜೈಲಿನಿಂದ ಇಂದು ಬಿಡುಗಡೆ ಆಗ್ತಾರಾ ನಟ ದರ್ಶನ್?

Share It

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿರುವ ನಟ ದರ್ಶನ್, ನ್ಯಾಯಾಂಗ ಬಂಧನದ ಅವಧಿಗೆ ಇಂದಿಗೆ ಮುಗಿಯಲಿದ್ದು, ಅವರು ಮತ್ತೇ ಜೈಲು ಸೇರ್ತಾರಾ ಅಥವಾ ಜಾಮೀನು ಪಡೆದು ಬಿಡುಗಡೆಯಾಗ್ತಾರಾ ಎಂಬ ಕುತೂಹಲ ಇದೀಗ ಕಾಡುತ್ತಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು, ಅವರನ್ನು ಎ-2 ಆರೋಪಿಯನ್ನಾಗಿಸಿದ್ದಾರೆ. ಅವರ ವಿರುದ್ಧ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕಿಡ್ನಾಪ್ ಮಾಡಿಸಿದ, ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮತ್ತು ಅನಂತರ ಅದನ್ನು ಬೇರೆಯವರ ತಲೆಗೆ ಕಟ್ಟಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಾಗೂ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ ಗುರುತರ ಅರೋಪಗಳಿವೆ.

ಮೇಲ್ಕಂಡ ಆರೋಪಗಳಿಗೆಲ್ಲ ಪೊಲೀಸರ ಬಳಿ ಬಲವಾದ ಸಾಕ್ಷ್ಯಾಧಾರಗಳಿದ್ದು, ಇದೇ ಕಾರಣದಿಂದ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿ ಇದೆ. ಈ ನಡುವೆ ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಆ ಅವಧಿ ಇಂದಿಗೆ ಮುಗಿಯಲಿದೆ. ಹೀಗಾಗಿ, ಅವರನ್ನು ಮತ್ತೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ಜಾಮೀನು ಅರ್ಜಿ ಸಲ್ಲಿಸಿದ ವಕೀಲರು: ಈ ನಡುವೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಹದಿನಾಲ್ಕು ದಿನ ಜೈಲಿನಲ್ಲಿ ಕಳೆದಿದ್ದಾರೆ. ಕೊಲೆಗೆ ಕುಮ್ಮಕ್ಕು ಎಂಬ ಆರೋಪಬಿಟ್ಟರೆ, ಅವರ ಮೇಲೆ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಹೀಗಾಗಿ, ಜಾಮೀನು ನೀಡಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಳ್ಳಲಿದ್ದಾರೆ.

ನ್ಯಾಯಾಲಯ ಅವರಿಗೆ ಮತ್ತೇ ನ್ಯಾಯಾಂಗ ಬಂಧನಕ್ಕೆ ನೀಡುತ್ತದೆಯೋ ಅಥವಾ ಜಾಮೀನು ನೀಡಲಿದೆಯೊ ಎಂಬುದು ಇದೀಗ ಕುತೂಹಲ ಮೂಡಿಸಿದೆ. ಈ ನಡುವೆ ನ್ಯಾಯಾಲಯದ ಆದೇಶಕ್ಕಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ.


Share It

You cannot copy content of this page