ಚಂಢೀಗಡ: ನೂತನ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ಗೆ ಭದ್ರತಾ ಸಿಬ್ಬಂದಿಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಚಂಢೀಗಡ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜೂನ್ 4 ರಂದು ಬಂದ ಫಲಿತಾಂಶದಲ್ಲಿ ಗೆಲುವು ಸಾಧಿಸಿ ಭಿಗುತ್ತಿದ್ದ ಕಂಗನಾ ರಣಾವತ್ಗೆ ವಿಮಾನ ನಿಲ್ದಾಣದ ತಪಾಸಣೆ ವೇಳೆ ಅಲ್ಲಿನ ಸಿಐಎಸ್ಫ್ ಮಹಿಳಾ ಅಧಿಕಾರಿ ಕಪಾಳ ಮೋಕ್ಷ ಮಾಡಿದ್ದಾರೆ. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ಕಂಗನಾ ಕಂಗಾಲಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿಯನ್ನು ಓಲೈಕೆ ಮಾಡಿಕೊಳ್ಳುತ್ತಲೇ ಇದ್ದ ಕಂಗನಾ ರಣಾವತ್ ಅದಕ್ಕಾಗಿಯೇ ಮಂಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆದುಕೊಂಡಿದ್ದರು. ಆದರೆ, ಬಿಜೆಪಿ ಓಲೈಕೆ ಮಾಡಿಕೊಳ್ಳುವ ಭರದಲ್ಲಿ ರೈತರ ಹೋರಾಟ ಟೀಕಿಸಿದ್ದರು. ಪಂಜಾಬ್ ರೈತರು ಹೋರಾಟ ಮಾಡುತ್ತಿರುವುದನ್ನು “ಖಲಿಸ್ತಾನಿಗಳ ಹೋರಾಟ” ಎಂದು ಕಂಗನಾ ಟೀಕಿಸಿದ್ದರು.
ಕಂಗನಾರ ಇಂತಹ ಹೇಳಿಕೆಯಿಂದ ಬೇಸತ್ತಿದ್ದ ಕುಲ್ವಿಂದರ್ ಕೌರ್ ಎಂಬ ಪಂಜಾಬಿನ ಅಧಿಕಾರಿ ಕಂಗನಾಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ದೆಹಲಿಗೆ ಆಗಮಿಸುವ ಸಲುವಾಗಿ ಚಂಢೀಗಡ ವಿಮಾನ ನಿಲ್ದಾಣಕ್ಕೆ ಬಂದಿದ್ದ, ಕಂಗನಾ ಮೇಲೆ ನಡೆದಿರುವ ಈ ಘಟನೆಯಿಂದ ಕೆಲ ಕಾಲ ವಿಮಾನ ನಿಲ್ದಾಣದಲ್ಲಿ ಗೊಂದಲ ಉಂಟಾಗಿತ್ತು.
ಕುಲ್ವಿಂದರ್ ಕೌರ್ ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಕಂಗನಾ ದೆಹಲಿಗೆ ತೆರಳಿ ಪ್ರಧಾನಿ ಮೋದಿ ಭೇಟಿ ಮಾಡಲು ಸಜ್ಜಾಗಿದ್ದರು. ಬಿಜೆಪಿ ಟಿಕೆಟ್ ನೀಡುವ ಮುನ್ನವೇ ಬಿಜೆಪಿ ಪರ ಅನೇಕ ಹೇಳಿಕೆಗಳನ್ನು ಕಂಗನಾ ನೀಡಿದ್ದರು. 2014ರ ನಂತರವೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿತ್ತು., ಜತೆಗೆ ರೈತರ ಹೋರಾಟ ವಿರೋಧಿಸಿದ್ದು, ಘಟನೆಗೆ ಕಾರಣ ಎನ್ನಲಾಗಿದೆ.

