ಅಪರಾಧ ಸಿನಿಮಾ ಸುದ್ದಿ

ಸಹನಟಿ ಮೇಲೆ ಲೈಂಗಿಕ ದೌರ್ಜನ್ಯ: ಮಡೆನೂರು ಮನು 5 ದಿನ ಪೊಲೀಸ್ ಕಸ್ಟಡಿಗೆ

Share It

ಬೆಂಗಳೂರು: ಸಹನಟಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ನಟ ಮಡೆನೂರು ಮನು ಅವರನ್ನು ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ನಟಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಡೆನೂರು ಮನು ಬಂಧನವಾಗಿದ್ದು, ಅತ್ಯಾಚಾರದ ಜತೆಗೆ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಯ್ಲಾಕ್ ಮೇಲ್ ಮಾಡಿದ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಮನು ಪೊಲೀಸರ ಅತಿಥಿಯಾಗಿದ್ದಾನೆ.

ಮನು ಅಭಿನಯದ ಚಿತ್ರ ಕುಲದಲ್ಲಿ ಕೀಲ್ಯಾವುದೋ ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದು, ಚಿತ್ರಕ್ಕಾಗಿ ನಡೆಯುತ್ತಿರುವ ಗಿಮಿಕ್ ಇದಾಗಿರಬಹುದು ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಾರೆ. ಇನ್ನೂ ಕೆಲವರು ಮನು ಶ್ರಮದಿಂದ ಸಿನಿಮಾ ಮಾಡಿದ್ದು, ಇದನ್ನು ಹಾಳು ಮಾಡಲು ಷಡ್ಯಂತ್ರ ನಡೆದಿದೆ ಎಂದಿದ್ದಾರೆ.

ಒಟ್ಟಾರೆ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಸಿನಿಮಾ ಹೀರೋ ಆಗುವರೆಗೆ ಬೆಳೆದ ನಟನೊಬ್ಬ ಇದೀಗ ವಿವಾದದಲ್ಲಿ ಸಿಲುಕಿದ್ದು, ಪೊಲೀಸರ ತನಿಖೆಯ ನಂತರವೇ ಪ್ರಕರಣದ ಸತ್ಯಾಸತ್ಯತೆ ಹೊರಬೀಳಲಿದೆ


Share It

You cannot copy content of this page