ಸುದ್ದಿ

ಆದಿಶಕ್ತಿ ಹುಲಿಕೆರೆಮ್ಮನವರ ಜಾತ್ರಾ ಮಹೋತ್ಸವ

Share It

ಚನ್ನರಾಯಪಟ್ಟಣ: ಶ್ರೀ ಆದಿಶಕ್ತಿ ಹುಲಿಕೆರೆಮ್ಮನವರ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ನಡೆಯಲಿದೆ ಎಂದು ಶ್ರೀ ಆದಿಶಕ್ತಿ ಹುಲಿಕೆರೆಮ್ಮ ಸೇವಾ ಸಮಿತಿಯ ಕಾರ್ಯದರ್ಶಿಗಳಾದ ಭರತ್ ಗೌಡ ತಿಳಿಸಿದರು.

ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿ ಅವರು 2024ರ ಏಪ್ರಿಲ್ 15ನೇ ಸೋಮವಾರ ಹಾಗೂ 16ನೇ ಮಂಗಳವಾರ, ಮತ್ತು 17ನೇ ಬುಧವಾರ ಮೂರು ದಿನಗಳ ಕಾಲ ಶ್ರೀ ಆದಿಶಕ್ತಿ ಹುಲಿಕೆರೆಮ್ಮ ದೇವಿ, ಶ್ರೀ ಆದಿಶಕ್ತಿ ಚಂಡಿಮಾಯಮ್ಮ, ಶ್ರೀ ದುರ್ಗಾ ಮಾಯಮ್ಮ ದೇವಿಯ ಲೋಕ ಕಲ್ಯಾಣಾರ್ಥವಾಗಿ ದುರ್ಗಾ ಸಪ್ತಶತಿ ಹಾಗೂ ವರುಣನ ಕೃಪೆಗೋಸ್ಕರ ಜಪ ಯಜ್ಞ ಹೋಮ ಹಾಗೂ 16ನೇ ವರ್ಷದ ಕೆಂಡಕೊಂಡ ಜಾತ್ರಾ ಮಹೋತ್ಸವ, ಅಮ್ಮನವರ ಗರ್ಭಗುಡಿಯ ಮುಖ್ಯ ದ್ವಾರಕೆ ಪಂಚಲೋಹದ ಲೇಪನ ಮತ್ತು ತೆಪ್ಪೋತ್ಸವ ಹಾಗೂ ಅನ್ನದಾಸೋಹ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಸಬಾ ಹೋಬಳಿಯ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಆದಿಶಕ್ತಿ ಹುಲಿಕೆರೆಮ್ಮನವರ 16ನೇ ವರ್ಷದ ಜಾತ್ರಾ ಮಹೋತ್ಸವು ಶ್ರೀ ಆದಿಶಕ್ತಿ ಹುಲಿಕೆರೆಮ್ಮ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಧರ್ಮದರ್ಶಿಗಳಾದ ಶ್ರೀ ದೊರೆಸ್ವಾಮಿಯವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಪೂಜಾ ಕಾರ್ಯಕ್ರಮವು ನಡೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಡಾ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರು, ಶ್ರೀ ಶ್ರೀ ಚಂದ್ರಶೇಖರ್ ಗುರೂಜಿ ಅವರು, ಶ್ರೀ ಶ್ರೀ ಗಂಗಾಧರೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು, ಶ್ರೀ ಗುರುಮೂರ್ತಿ ಗುರೂಜಿ, ಪುಣ್ಯ ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ಶಶಿಕಲಾ ಮಹೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮಕ್ಕೆ ನಾಡಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಶ್ರೀ ಆದಿಶಕ್ತಿ ಹುಲಿಕೆರೆ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಆದಿಶಕ್ತಿ ಹುಲಿಕೆರೆಯಮ್ಮ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಧರ್ಮದರ್ಶಿಗಳಾದ ಶ್ರೀ ದೊರೆಸ್ವಾಮಿ, ಶ್ರೀ ಆದಿಶಕ್ತಿ ಹುಲಿಕೆರೆಮ್ಮ ಸೇವಾ ಸಮಿತಿಯ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ವೀರ ಸಮರ ಸೇನೆ ಜಿಲ್ಲಾಧ್ಯಕ್ಷರಾದ ಭರತ್ ಗೌಡ, ಶ್ರೀ ಆದಿಶಕ್ತಿ ಹುಲಿಕೆರೆಮ್ಮ ಸೇವಾ ಸಮಿತಿಯ ಖಜಾಂಚಿಗಳಾದ ಮನು, ಕರ್ನಾಟಕ ವೀರ ಸಮರ ಸೇನೆಯ ತಾಲೂಕು ಅಧ್ಯಕ್ಷರಾದ ಸಂದೇಶ್ ಗೌಡ, ಶಿಕ್ಷಕರಾದ ಜೋಗಿಪುರ ಗಂಗಾಧರ್, ಹುಲಿಕೆರೆಮ್ಮ ಸೇವಾ ಸಮಿತಿ ಭಕ್ತರಾದ ಮಮತ, ಪವನ್, ವಜ್ರೇಶ್, ಕಾರ್ತಿಕ್, ಕೊಡಿಗೌಡ, ಆನಂದ್ ಹಾಜರಿದ್ದರು.


Share It

You cannot copy content of this page