ಅರ್ನೋಸ್ ವೇಲ್ಜಾಸ್ : 2024 ರ T20 ವಿಶ್ವಕಪ್ ನ ರೋಚಕ ಪಂದ್ಯದಲ್ಲಿ ನವೀನ್ ಉಲ್ಲಕ್ ಹಾಗೂ ರಶೀದ್ ಖಾನ್ ನ ಮಾರಕ ಬೌಲಿಂಗ್ ದಾಳಿಯಿಂದಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಅಫ್ಘಾನಿಸ್ತಾನ್ ತಂಡ ಸೆಮಿ ಫೈನಲ್ಸ್ ತಲುಪಿದೆ.
ಅರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮೊದಲನೆಯ ಗುಂಪಿನ ಸೂಪರ್ 8 ರ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು ಬಾಂಗ್ಲಾದೇಶ ವನ್ನು ಆಲ್ ಔಟ್ ಮಾಡುವ ಮೂಲಕ ಇತಿಹಾಸ ಬರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ್ ತಂಡವು 20 ಓವರ್ ನಷ್ಟಕ್ಕೆ 5 ವಿಕೆಟ್ ಗಳನ್ನು ಕಳೆದುಕೊಂಡು 115 ರನ್ ಗಳನ್ನು ಕಲೆಹಾಕಿತು. ಅಫ್ಘಾನ್ ನ ಆರಂಭಿಕ ಆಟಗಾರರನಾದ ಗುರ್ಬಾಜ್ 55 ಎಸೆತಗಳಲ್ಲಿ 3 ಬೌಡರಿ 1 ಸಿಕ್ಸರ್ ಒಳಗೊಂಡಂತೆ 78 .2 ರ ಸರಾಸರಿಯಲ್ಲಿ ಬ್ಯಾಟ್ ಬಿಸಿದರು. ಉಳಿದ ಯಾರೊಬ್ಬರೂ ಉತ್ತಮ ಮೊತ್ತವನ್ನು ಕಲೆಹಾಕಲು ಸಾಧ್ಯವಾಗದ ಕಾರಣ ಅಫ್ಘಾನ್ ತಂಡವು ಅಲ್ಪ ಮೊತ್ತಕ್ಕೆ ತೃಪ್ತಿ ಪಡಬೇಕಾಯಿತು. ಬಾಂಗ್ಲಾ ತಂಡದ ರಶೀದ್ ಹುಸೇನ್ 26 ರನ್ ಕೊಟ್ಟು 3 ಪ್ರಮುಖ ವಿಕೆಟ್ ಗಳನ್ನು ಕಬಳಿಸಿದರು. ತಸ್ಲೀಮ್ ಅಮೀದ್ ಹಾಗೂ ಮುಸ್ತಫಿಜುರ್ ತಲಾ 1 ವಿಕೆಟ್ ಪಡೆದು ಕಡಿಮೆ ಮೊತ್ತಕ್ಕೆ ಅಫ್ಘಾನ್ ತಂಡವನ್ನು ಕಟ್ಟಿಯಾಕುವಲ್ಲಿ ಯಶಸ್ವಿಯಾದರು.
ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದ
ಆರಂಭಿಕ ಆಟಗಾರ ಲಿಟ್ಟನ್ ದಾಸ್ 49 ಎಸೆತದಲ್ಲಿ 4
5 ಬೌಡರಿ 1 ಸಿಕ್ಸರ್ ನೊಂದಿಗೆ 53ರನ್ ಕಳೆಹಾಕಿದರು. ಇತರ ಬ್ಯಾಟ್ ಮಾನ್ಸ್ ಗಳ ಸತ್ ನೀಡದ ಕಾರಣ ಬಾಂಗ್ಲಾ ಸೋಲನ್ನು ಅನುಭವಿಸಬೇಕಾಯಿತು.
ಕ್ಯಾಪ್ಟನ್ ರಶೀದ್ ಖಾನ್ ನ ಸ್ಪಿನ್ ದಾಳಿಯಿಂದ 4 ವಿಕೆಟ್ ಪಡೆದರು. ವೇಗಿ ನವೀನ್ ಉಲ್ಲಖ್ 3 ವಿಕೆಟ್ ಗಳಿಸಿದರೆ, ಪರೂಕಿ 1 ವಿಕೆಟ್ ಪಡೆದರು. ಗುಲ್ ಬದಿನ್ 1 ವಿಕೆಟ್ ಪಡೆಯುವ ಮೂಲಕ ಸೆಮಿ ಫೈನಲ್ಸ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೇಣಿಸಲಿದ್ದಾರೆ.

