ಕ್ರೀಡೆ ಸುದ್ದಿ

ಟಿ-_20 ವಿಶ್ವಕಪ್ ನಲ್ಲಿ ಮತ್ತೊಂದು ಮಿಸ್ಟರಿ ಫಲಿತಾಂಶ: ನ್ಯೂಜಿಲೆಂಡ್ ಸೋಲಿಸಿದ ಅಫ್ಘಾನಿಸ್ತಾನ

Share It

ಗಯಾನ: ಟಿ-20 ವಿಶ್ವಕಪ್ ದಿನದಿಂದ ದಿನಕ್ಕೆ ಅಚ್ಚರಿಯ ಫಲಿತಾಂಶಗಳನ್ನು ದಾಖಲು ಮಾಡುತ್ತಲೇ ಸಾಗುತ್ತಿದ್ದು, ಕ್ರಿಕೆಟ್ ಕೂಸು ಆಫ್ಘಾನಿಸ್ತಾನ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಹೀನಾಯ ಸೋಲುಣಿಸಿದೆ.

ವೆಸ್ಟ್ ಇಂಡೀಸ್ ನ ಗಯಾನಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಫ್ಘಾನಿಸ್ತಾನ ತಂಡವನ್ನು ಆಹ್ವಾನಿಸಿತು. ಬ್ಯಾಟಿಂಗ್ ನಡೆಸಿದ ಆಪ್ಘಾನಿ ಓಪನರ್ ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆರು ವಿಕೆಟ್ ಕಳೆದುಕೊಂಡು 159 ರನ್ ಕಲೆ ಹಾಕುವ ಮೂಲಕ 160 ರನ್ ಗಳ ಟಾರ್ಗೆಟ್ ನೀಡಿತ್ತು.

ವಿಕೆಟ್ ಕೀಪರ್ ಗುರ್ಬಾಜ್ 80 ರನ್ ಗಳಿಸಿದರೆ, ಇಬ್ರಾಹಿಂ ಜರ್ದಾನ್ 44 ರನ್ ಗಳಿಸಿದರು. ನಂತರ ಬಂದ ಅಜಾಮತ್ತುಲ್ಲಾ 22 ರನ್ ಸಿಡಿಸಿದರು. ಅನಂತರ ಬಂದ ಬ್ಯಾಟರ್ ಗಳಿಂದ ಯಾವುದೇ ರನ್ ಬರಲಿಲ್ಲ. ಹೀಗಾಗಿ, ಅಂತಿಮವಾಗಿ ಆಫ್ಘನ್ ಆರು ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಬೋಲ್ಟ್ ಮತ್ತು ಮ್ಯಾಟ್ ಹೆನ್ರಿ ತಲಾ ವಿಕೆಟ್ ಪಡೆದು ಮಿಂಚಿದರು.

ಆದರೆ, ಈ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ಬ್ಯಾಟರ್ ಗಳು ನೀರಸ ಪ್ರದರ್ಶನ ತೋರಿದರು. ಕೇವಲ 75 ರನ್ ಗೆ ಆಲೌಟ್ ಆಗುವ ಮೂಲಕ ನಿರಾಸೆ ಮೂಡಿಸದರು‌. ಗ್ಲೇನ್ ಫಿಲಿಪ್ಸ್ 18 ರನ್ ಗಳಿಸಿದರೆ, ಮ್ಯಾಟ್ ಹೆನ್ರಿ 12 ರನ್ ಗಳಿಸಿದರು. ಇನ್ನುಳಿದ ನ್ಯೂಜಿಲೆಂಡ್ ಬ್ಯಾಟರ್ ಗಳ್ಯಾರು ಎರಡಂಕಿಯ ಗಡಿಯನ್ನು ದಾಟಲಿಲ್ಲ. ಇದರ ಪರಿಣಾಮ ನ್ಯೂಜಿಲೆಂಡ್75 ರನ್ ಗಳಿಗೆ ಆಲೌಟ್ ಆಯಿತು.

ಆಫ್ಘನ್ ಪರವಾಗಿ ಫಝಾಲ್ಲಕ್ ಫರೂಕಿ ಮತ್ತು ನಾಯಕ ರಶೀದ್ ಖಾನ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ, ತಲಾ ನಾಲ್ಕು ವಿಕೆಟ್ ಪಡೆದರು‌. ಮಹಮದ್ ನಬಿ ಕೂಡ ಉಳಿದ ಎರಡು ವಿಕೆಟ್ ಪಡೆದುಕೊಂಡು ಗೆಲುವಿಗೆ ಕಾಣಿಕೆ ನೀಡಿದರು. ಉತ್ತಮ ಬ್ಯಾಟಿಂಗ್ ಮಾಡಿದ ಮಹಮದ್ದುಲ್ಲಾ ಗುರ್ಬಾಜ್ ಪಂದ್ಯ ಶ್ರೇಷ್ಠ ಎನಿಸಿಕೊಂಡರು. ಆ ಮೂಲಕ ಆಫ್ಘಾನಿಸ್ತಾನ ತಂಡ ಐತಿಹಾಸಿಕ ಗೆಲುವು ದಾಖಲಿಸಿತು.


Share It

You cannot copy content of this page