ಸುದ್ದಿ

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಅಕ್ಕಪಡೆ :ರಾಜ್ಯದ 30 ಜಿಲ್ಲೆಯಲ್ಲಿ ಕಾರ್ಯಾಚರಣೆಗೆ ಸಿದ್ಧ

Share It

ಬೆಂಗಳೂರು: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಮತ್ತು ಘೋಷಣೆಗಳನ್ನು ತಡೆಯಲು ಮುಂದಡಿಯಿಟ್ಟಿರುವ ಸರಕಾರ ಅಕ್ಕ ಪಡೆಯನ್ನು ರಚನೆ ಮಾಡಿ ಆದೇಶ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಕ್ಕ ಪಡೆಯನ್ನು ರಾಜ್ಯದ 30 ಜಿಲ್ಲೆ ಮತ್ತು 5 ಪೊಲೀಸ್‌ ಆಯುಕ್ತಾಲಯಗಳಲ್ಲಿ ಸ್ಥಾಪಿಸಿ, ಮಹಿಳೆಯರು ಮತ್ತು ಮಕ್ಕಳಿಗೆ ಕಾನೂನಿನ ಅರಿವು, ತಕ್ಷಣದ ರಕ್ಷಣೆ ಮತ್ತು ಅಗತ್ಯ ನೆರವು ನೀಡಲು ಉದ್ದೇಶಿಸಲಾಗಿದೆ.

ದೌರ್ಜನ್ಯ, ನಿರ್ಲಕ್ಷ್ಯ ಅಥವಾ ಶೋಷಣೆಗೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲದಲ್ಲಿ ನೆರವು ಮತ್ತು ರಕ್ಷಣೆ ಒದಗಿಸಿ ಭಯ ಮುಕ್ತ ವಾತಾವರಣವನ್ನು ಸೃಷ್ಟಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು/ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ಮಹಿಳಾ ಉಪ ಪೊಲೀಸ್ ವರಿಷ್ಠಾಧಿಕಾರಿಗಳು ತಂಡದಲ್ಲಿ ಇರಲಿದ್ದಾರೆ.

ಈ ಸಮಿತಿಯು ಹೋಂಗಾರ್ಡ್ ಗಳನ್ನು ನೇಮಿಸಿ, ಅವರ ಮೂಲಕ ಶಾಲಾ ಕಾಲೇಜುಗಳು, ಗಾರ್ಮೆಂಟ್ಸ್, ಫಾಕ್ಟರಿಗಳು, ಮೊದಲಾದ‌ ಮಹಿಳೆಯರು ಹೆಚ್ಚಾಗಿ ಕಾರ್ಯನಿರ್ವಹಿಸುವ ಸ್ಥಳಗಳಿಗೆ ಭೇಟಿ ನೀಡಿ, ಅವರಿಗೆ ಆಗುವ ಸಮಸ್ಯೆಗಳನ್ನು ವರದಿ ಮಾಡುವುದು, ಜಾಗೃತಿ ಮೂಡಿಸುವುದು ಸೇರಿದಂತೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವ ಕಾರ್ಯನಿರ್ವಹಿಸಲಿದೆ.


Share It

You cannot copy content of this page