ಡಿ.31 ರ ಸಂಜೆ 6 ಗಂಟೆಯಿಂದ ಎಲ್ಲ ಬಿಬಿಎಂಪಿ ಪಾರ್ಕುಗಳು ಬಂದ್ !
ಬೆಂಗಳೂರು: ಡಿ.31ರ ಸಂಜೆ 6 ಗಂಟೆಯಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಉದ್ಯಾನಗಳು, ಕೆರೆಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ಬಂದ್ ಮಾಡಲು ತೀರ್ಮಾನಸಲಾಗಿದೆ.
ಹೊಸ ವರ್ಷಾಚರಣೆಯ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರಲಿದ್ದು, ಇದು ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವ ಸಾಧ್ಯತೆಯಿರುತ್ತದೆ ಎಂಬ ಕಾರಣಕ್ಕೆ ಬಿಬಿಎಂಪಿ ಈ ಸೂತ್ತೋಲೆ ಹೊರಡಿಸಿದೆ. ಈ ಪ್ರಕಾರ ಕೆರೆಗಳು, ಉದ್ಯಾನಗಳಲ್ಲಿ ಡ.೩೧ರ ಸಂಜೆ ೬ ಗಂಟೆಯಿAದಲೇ ಪ್ರವೇಶ ನಿರ್ಬಂಧಿಸಲಾಗುತ್ತದೆ.
ಉದ್ಯಾನ, ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಪಾರ್ಟಿ ಮಾಡುವುದು, ಗುಂಪುಗೂಡುವುದು ಕಾನೂನು ಬಾಹಿರವಾಗಿದ್ದು, ಇದಕ್ಕೆ ಸಂಬAಧಿಸಿದAತೆ ಪೊಲೀಸರ ಜತೆಗೆ ಪಾಲಿಕೆ ಅಧಿಕಾರಿಗಳು ಸಮನ್ವಯತೆ ಸಾಧಿಸುವಂತೆ ಸೂಚನೆ ನೀಡಲಾಗಿದೆ.


