ಜಾಮ್‌ನಗರದಿಂದ ದ್ವಾರಕೆಗೆ ಪಾದಯಾತ್ರೆ ಕೈಗೊಂಡ ಅನಂತ್ ಅಂಬಾನಿ

Share It

ಅನಂತ್ ಅಂಬಾನಿ ಅವರು ತಾವೊಬ್ಬ ಯಶಸ್ವೀ ಉದ್ಯಮಿಯಷ್ಟೇ ಅಲ್ಲ, ಸನಾತನ ಧರ್ಮದಲ್ಲಿ ನಂಬಿಕೆ ಹೊಂದಿರುವ ವ್ಯಕ್ತಿಯೂ ಹೌದು ಎನ್ನುವುದನ್ನು ಪಾದಯಾತ್ರೆ ಕೈಗೊಳ್ಳುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸಿರಿವಂತ ಕುಟುಂಬದ ಅವರು ದೈವಿಕತೆಯೊಂದಿಗೆ ಐಕ್ಯತೆಯನ್ನು ಬಯಸುವ ಈ ಭಾರತೀಯ ವಿಧಾನವನ್ನು ಅನುಸರಿಸಿ ತೀರ್ಥಯಾತ್ರೆ ಪ್ರಾರಂಭಿಸಿದ್ದಾರೆ. 29 ವರ್ಷದ ಅನಂತ್ ಅಂಬಾನಿ ತಮ್ಮ ಪೂರ್ವಜರ ಹುಟ್ಟೂರು ಮತ್ತು ಕರ್ಮಭೂಮಿ ಜಾಮ್‌ನಗರದಿಂದ ದ್ವಾರಕಾಕ್ಕೆ 170 ಕಿಲೋಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ.

ಮಾ. 29 ರಂದು ಪಾದಯಾತ್ರೆ ಆರಂಭಿಸಿದ ಅವರು ಪ್ರತಿದಿನ ಸುಮಾರು 20 ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಾರೆ. ಪ್ರತಿ ರಾತ್ರಿ ಸುಮಾರು ಏಳು ಗಂಟೆಗಳ ಕಾಲ ನಡೆಯುತ್ತಿದ್ದಾರೆ. ಅವರು ಏ. 8 ರಂದು ತಮ್ಮ 30 ನೇ ಹುಟ್ಟುಹಬ್ಬದ ಒಂದು ದಿನ ಮೊದಲು ದ್ವಾರಕಾವನ್ನು ತಲುಪಲಿದ್ದಾರೆ.

ಅಂಬಾನಿ ಅವರು ಪೂಜ್ಯ ಮತ್ತು ಸದ್ಭಾವನೆ ಮನೋಭಾವದಿಂದ ಪಾದಯಾತ್ರೆ ಕೈಗೊಂಡಿದ್ದಾರೆ. ಕೆಲವರು ಒಗ್ಗಟ್ಟಿನಿಂದ ಅವರೊಂದಿಗೆ ಹೆಜ್ಜೆಹಾಕಿದರೆ, ಕೆಲವರು ಪ್ರಧಾನ ದೇವತೆ ಭಗವಾನ್ ದ್ವಾರಕಾಧೀಶನ ಚಿತ್ರಗಳನ್ನು ನೀಡಿದ್ದಾರೆ. ಅಂಬಾನಿ ಅವರು ಅಪರೂಪದ ಹಾರ್ಮೋನುಗಳ ಕಾಯಿಲೆ ಕುಶಿಂಗ್ ಸಿಂಡ್ರೋಮ್ ಮತ್ತು ಅನಾರೋಗ್ಯಕರ ಬೊಜ್ಜು, ಜೊತೆಗೆ ಅಸ್ತಮಾ ಮತ್ತು ತೀವ್ರವಾದ ಶ್ವಾಸಕೋಶದ ಕಾಯಿಲೆ ಎದುರಿಸುತ್ತಿದ್ದರೂ ಕಠಿಣ ಪಾದಯಾತ್ರೆ ಕೈಗೊಂಡಿರುವುದು ಅವರ ಬದ್ಧತೆಯನ್ನು ಸೂಚಿಸುತ್ತದೆ‌.

ಈ ಆಧ್ಯಾತ್ಮಿಕ ಪಾದಯಾತ್ರೆಯುದ್ದಕ್ಕೂ, ಅನಂತ್ ದ್ವಾರಕಾಕ್ಕೆ ಹೋಗುವಾಗ ಹನುಮಾನ್ ಚಾಲೀಸಾ, ಸುಂದರಕಾಂಡ ಮತ್ತು ದೇವಿ ಸ್ತೋತ್ರ ಪಠಿಸುತ್ತಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಸನಾತನ ಧರ್ಮನಿಷ್ಠರಾಗಿದ್ದು ಬದರೀನಾಥ್, ಕೇದಾರನಾಥ, ಕಾಮಾಕ್ಯ, ನಾಥದ್ವಾರ, ಕಾಲಿಘಾಟ್ ಮತ್ತು ಕುಂಭಮೇಳಗಳಂತಹ ಧಾರ್ಮಿಕ ತಾಣಗಳಿಗೆ ಭೇಟಿ ನೀಡಿ ದೇವರ ಅನುಗ್ರಹ ಪಡೆಯುತ್ತಿದ್ದಾರೆ.

ಆಧ್ಯಾತ್ಮಿಕ ಸಂಪ್ರದಾಯದ ಹೆಜ್ಜೆಗಳನ್ನು ಅನುಸರಿಸಬಹುದು ಮತ್ತು ವ್ಯವಹಾರ ಜಗತ್ತಿನಲ್ಲಿ ಭವಿಷ್ಯವನ್ನು ಸೃಷ್ಟಿಸಬಹುದು ಎಂಬುದನ್ನು ಅನಂತ್ ಅಂಬಾನಿ ಅವರು ಈ ಮೂಲಕ ತಿಳಿಸಿದ್ದಾರೆ.


Share It

You May Have Missed

You cannot copy content of this page