ಬೆಂಗಳೂರು : ‘ಇದು ಎಂಥ ಲೋಕವಯ್ಯಾ’ ಸಿನಿಮಾದ ಆಗಮನ ನಿನ್ನ ಆಗಮನ ಮತ್ತು ಸಂಜೆ ವೇಳೆಗೆ ಎಂಬ ಎರಡು ಹಾಡುಗಳನ್ನು ಕನ್ನಡ ಚಿತ್ರ ರಂಗದ ಹಿರಿಯ ನಟ ಅನಂತ್ ನಾಗ್ ಬಿಡುಗಡೆಗೊಳಿಸಿದ್ದಾರೆ. ಬಳಿಕ ತಂಡಕ್ಕೆ ಶುಭಾಶಯವನ್ನು ತಿಳಿಸಿದ್ದಾರೆ. ಸದ್ಯ ಸಿನಿಮಾ ಸಂಪೂರ್ಣ ಮುಗಿದಿದ್ದು, ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ನಡಿ ನಿರ್ಮಿಸಿದ್ದು ,ಆಗಸ್ಟ್ 9 ಕ್ಕೆ ತೆರೆ ಮೇಲೆ ಬರಲಿದೆ.
ಈ ಸಿನಿಮಾವನ್ನು ಸಿತೇಶ್ ಸಿ ಗೋವಿಂದ್ ನಿರ್ದೇಶನ ಮಾಡಿದ್ದಾರೆ. ಹಾಡನ್ನು ಬಿಡುಗಡೆಗೊಳಿಸಿ ಅನಂತ್ ನಾಗ್ ಮಾತನಾಡಿ ” ಈ ಹಿಂದೆ ನಾನು ನಟಿಸಿದ ಸಿನಿಮಾದ ಹಾಡು ಇದು ಎಂಥ ಲೋಕವಯ್ಯಾ . ಈಗ ಆ ಹಾಡಿನ ಸಾಲು ಸಿನಿಮಾದ ಟೈಟಲ್ ಆಗಿದೆ. ನನಗೆ ಬಹಳ ಸಂತೋಷವಾಗುತ್ತಿದೆ. ಈ ಚಿತ್ರವು ಯಶಸ್ಸು ಕಾಣಲಿ ಎಂದು ಹಾರೈಸಿದರು.”
ಚಿತ್ರದ ನಿರ್ದೇಶಕ ಸಿತೇಶ್ ಸಿ ಗೋವಿಂದ್ ಮಾತನಾಡಿ ” ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದೇನೆ. ಸಿನಿಮಾದಲ್ಲಿ ಒಟ್ಟು 28 ಪಾತ್ರಗಳಿವೆ. ತುಂಬಾ ಫ್ಯಾಸಿನೇಟ್ ಆಗಿ ಚಿತ್ರವನ್ನು ಕಟ್ಟಿದ್ದೇನೆ . ಆಗಸ್ಟ್ 9 ಕ್ಕೆ ತೆರೆ ಕಾಣಲಿದೆ ಎಂದು ಹೇಳಿದರು. “
ರಾಹುಲ್ ಹಜಾರೆ, ದೀಪಾ ಸಿತೇಸ್ ಇಬ್ಬರು ನಿನ್ನ ಆಗಮನ ನಿನ್ನ ಆಗಮನ ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ. ರಿತ್ವಿಕ್ ಎಸ್ ಚಂದ್ , ಭದ್ರ ರಾಜಿನ್ ಹಾಡನ್ನು ಹಾಡಿದ್ದಾರೆ. ಹಾಗೇ ಸಂಜೆ ವೇಳೆಗೆ ಹಾಡಿಗೆ ಕೀರ್ತನ್ ಭಂಡಾರಿ ಹಾಗೂ ಪುಷ್ಪರಾಜ್ ಗುಂಡ್ಯ ಸಾಹಿತ್ಯ ಬರೆದಿದ್ದಾರೆ.
ಸಜೀವ್ ಸ್ಟಾನ್ಲಿ ಕಂಠವನ್ನು ನೀಡಿದ್ದಾರೆ. ಎರಡು ಹಾಡುಗಳಿಗೆ ರಿತ್ವಿಕ್ ಚಂದ್ ಸಂಗೀತವನ್ನು ಸೇರಿಸಿದ್ದಾರೆ. ಕೇರಳದ ಗಡಿ ಭಾಗದ ಹಳ್ಳಿಗಳ ಕಥೆಯನ್ನು ಚಿತ್ರ ಒಳಗೊಂಡಿದೆ. ತಾರಾ ಬಳಗದಲ್ಲಿ ಅನುರಾಜ್ ಕಕ್ಯಪದವ್, ಮೈತ್ರಿ, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಸುಕನ್ಯಾ, ವಿಶ್ವನಾಥ್ ಅಸೈಗೋಳಿ, ಚಂದ್ರಹಾಸ ಉಳ್ಳಾಲ್, ಅರ್ಜುನ್ ಕಜೆ, ಪ್ರೀತಿ ಮುತ್ತಪ್ಪ, ದೀಪಕ್ ರೈ, ಸಂತೋಷ್ ಶೆಣೈ, ಸುಧೀರ್ ರಾಜ್, ಪ್ರಶಾಂತ್ ಜೋಗಿ, ಹರೀಶ್ ಬಂಗೇರ, ಪ್ರಕಾಶ್ ತುಮ್ಮಿನಾಡ್, ಇದ್ದಾರೆ.