ಸುದ್ದಿ

ಲಕ್ಕುಂಡಿಯಲ್ಲಿ ಪುರಾತನ ವಸ್ತುಗಳು ಪತ್ತೆ: ಪುರಾತತ್ವ ಇಲಾಖೆಯಿಂದ ಉತ್ಖನನ

Share It

ಗದಗ : ತಳಹದಿ ತೆಗೆಯುವಾಗ ಚಿನ್ನ ಸಿಕ್ಕಿದ್ದ ಲಕ್ಕುಂಡಿಯಲ್ಲಿ ಇದೀಗ ಪುರಾತತ್ವ ಇಲಾಖೆಯ ಉತ್ಖನನ ಆರಂಭವಾಗಿದ್ದು, ಪುರಾತನ ವಸ್ತುವೊಂದು ಪತ್ತೆಯಾಗಿದೆ.

ಕುಟುಂಬವೊAದು ತಮ್ಮ ಮನೆಯ ನಿರ್ಮಾಣಕ್ಕೆ ಪಾಯ ತೆಗೆಯುವಾಗ ಸುಮಾರು ೪೬೫ ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿದ್ದವು. ಆ ಕುಟುಂಬ ಚಿನ್ನವನ್ನು ಸರಕಾರಕ್ಕೆ ಒಪ್ಪಿಸಿತ್ತು. ಅನಂತರ ಲಕ್ಕುಂಡಿಯಲ್ಲಿ ಉತ್ಖನನ ನಡೆಸಲು ಸರಕಾರ ತೀರ್ಮಾನಿಸಿತ್ತು.

ಇದರ ಭಾಗವಾಗಿ ಉತ್ಖನನ ನಡೆಯುತ್ತಿದ್ದು, ಮೊದಲ ದಿನದ ಉತ್ಖನನದಲ್ಲಿ ಪುರಾತನ ವಸ್ತುವೊಂದು ಪತ್ತೆಯಾಗಿದೆ. ಅದರ ಬಗ್ಗೆ ಮಾಹಿತಿ ಪಡೆಯು ಹಿರಿಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಲಿದ್ದಾರೆ. ಅದು ಯಾವ ರೀತಿಯ ವಸ್ತು ಎಂಬ ಕುತೂಹಲ ಇದೀಗ ಮನೆ ಮಾಡಿದೆ.

ಈ ನಡುವೆ ಲಕ್ಕಂಡಿ ಪ್ರಾಧಿಕಾರದ ಸದಸ್ಯರು, ಆರು ಅಡಿ ಅಗೆಯುತ್ತಿದ್ದಂತೆ ಇಂಥಹ ಅನೇಕ ವಸ್ತುಗಳು ಸಿಗಲಾರಂಭಿಸುತ್ತವೆ. ಈ ಉತ್ಖನನದಿಂದ ಅನೇಕ ಮಹತ್ವದ ಸಂಗತಿಗಳು ಲಭ್ಯವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.


Share It

You cannot copy content of this page