ಮಲಿಕೀಪುರ: ಆಂಧ್ರಪ್ರದೇಶದ ಮಲಿಕೀಪುರಂ ಬಳಿ ಓಎನ್‌ಜಿಸಿ ಪೈಪ್‌ನಲ್ಲಿ ಅನಿಲ ಸೋರಿಕೆಯಾಗಿದ್ದು, ಪೈಪ್ ಲೈನ್ ಸ್ಫೋಟಗೊಂಡಿದ್ದು, ಭಾರಿ ಬೆಂಕಿಗೆ ಕಾರಣವಾಗಿದೆ.
ಆಂದ್ರದ ಕೋನಸೀಮೆ ಜಿಲ್ಲೆಯ ಮಲಿಕೀಪುರದಲ್ಲಿ ಓಎನ್‌ಜಿಸಿ ಫೈಪ್‌ಲೈನ್ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಬಾವಿ ಕಾಮಗಾರಿ ವೇಳೆ ಘಟನೆ ನಡೆದಿದ್ದು, ಸ್ಫೋಟದ ತೀತ್ರವತೆಗೆ ಸುಟ್ಟುಹೋದ ಕೃಷಿ ಭೂಮಿಯೆಲ್ಲವೂ ಸುಟ್ಟು ಕರಕಲಾಗಿದೆ.
ಭಾರಿ ಗಾತ್ರದ ಬೆಂಕಿ ಉರಿಯುತ್ತಿದ್ದು, ಏಳು ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡೆಗಿವೆ. ರೈತರು ಜಾನುವಾರಗಳ ಸಮೇತ ಮನೆಗಳನ್ನು ತೊರೆದು ಹೋಗುತ್ತಿದ್ದಾರೆ.

