ನೇಹಾ ಹತ್ಯೆ: ಅಂಜುಮನ್ ಇಸ್ಲಾಂ ಕಮಿಟಿಯಿಂದ ನಾಳೆ ಧಾರವಾಡದಲ್ಲಿ ಅರ್ಧ ದಿನ ಬಂದ್ ಗೆ ಕರೆ
ಹುಬ್ಬಳ್ಳಿಯಲ್ಲಿ ಎಂ.ಸಿ.ಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಳನ್ನು ಹಾಡಹಗಲೇ ದಾರುಣವಾಗಿ ಹಲವು ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಕೃತ್ಯವನ್ನು ಖಂಡಿಸಿ ಧಾರವಾಡದಲ್ಲಿ ನಾಳೆ ಸೋಮ ವಾರ ಮುಸ್ಲಿಂ ಸಮುದಾಯದವರು ಅರ್ಧ ದಿನ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಬೇಕೆಂದು ಅಂಜುಮನ್ ಇಸ್ಲಾಂ ಕಮಿಟಿ ಕರೆ ನೀಡಿದೆ.
ನಾಳೆ ಸೋಮವಾರದ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಧಾರವಾಡದಲ್ಲಿ ಮುಸ್ಲಿಂ ಸಮುದಾಯದ ವರ್ತಕ ತಮ್ಮ ಅಂಗಡಿ-ಮುಂಗಟ್ಟು ಹಾಗೂ ಎಲ್ಲಾ ರೀತಿಯ ವ್ಯಾಪಾರ ಮಳಿಗೆಗಳನ್ನು ತಾತ್ಕಾಲಿಕವಾಗಿ ಮುಚ್ಚಿ ನೇಹಾ ಹಿರೇಮಠ್ ದಾರುಣ ಹತ್ಯೆ ಕೃತ್ಯವನ್ನು ಖಂಡಿಸಬೇಕು ಎಂದು ಅಂಜುಮನ್ ಇಸ್ಲಾಂ ಕಮಿಟಿ ಕರೆ ನೀಡಿದೆ.
ಇದೇ ವೇಳೆ ನೇಹಾ ಹಿರೇಮಠ್ ಳನ್ನು ದಾರುಣವಾಗಿ ಹಲವು ಬಾರಿ ಚಾಕುವಿನಿಂದ ಹಾಡಹಗಲೇ ಚುಚ್ಚಿ ಕೊಲೆ ಮಾಡಿ ಪೊಲೀಸರಿಂದ ಇದೀಗ ನ್ಯಾಯಾಂಗ ಬಂಧನದಲ್ಲಿರುವ ಹಂತಕ ಫಯಾಜ್ ಗೆ ಕಾನೂನು ರೀತಿಯಲ್ಲಿ ಸೂಕ್ತ ಶಿಕ್ಷೆ ವಿಧಿಸಬೇಕೆಂದು ಸಹ ಧಾರವಾಡದ ಅಂಜುಮನ್ ಇಸ್ಲಾಂ ಕಮಿಟಿ ಒತ್ತಾಯಿಸಿದೆ.